ಮನೆ ಅಪರಾಧ ಆಂಧ್ರಪ್ರದೇಶ: ನಿಂತ ಟ್ರಕ್​ಗೆ ಕಾರು ಡಿಕ್ಕಿ- ಐವರ ಸಾವು

ಆಂಧ್ರಪ್ರದೇಶ: ನಿಂತ ಟ್ರಕ್​ಗೆ ಕಾರು ಡಿಕ್ಕಿ- ಐವರ ಸಾವು

0

ಆಂಧ್ರಪ್ರದೇಶ(Andrapradesh): ನಿಂತ ಟ್ರಕ್​ನ ಹಿಂಬದಿಗೆ ಕಾರೊಂದು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪ್ರಕಾಶಂ  ಜಿಲ್ಲೆಯ ಕಂಭಂ ಬಳಿ ನಡೆದಿದೆ.

ಮೃತರನ್ನು ಪಲ್ನಾಡು ಜಿಲ್ಲೆಯ ವೆಲ್ದುರ್ತಿ ತಾಲೂಕಿನ ಸಿರಿಗಿರಿಪಾಡು ನಿವಾಸಿಗಳಾದ ಅನಿಮಿ ರೆಡ್ಡಿ (60), ಗುರವಮ್ಮ (60), ಅನಂತಮ್ಮ (55), ಆದಿಲಕ್ಷ್ಮಿ (58) ಮತ್ತು ನಾಗಿರೆಡ್ಡಿ (24) ಎಂದು ಗುರುತಿಸಲಾಗಿದೆ.

ಮಾಚರ್ಲದಿಂದ ತಿರುಪತಿಗೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು, ಅಪಘಾತದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಾರು ಸಂಪೂರ್ಣ ನಜ್ಜಾಗಿದೆ.