ಮನೆ ರಾಜಕೀಯ ಸಿದ್ದರಾಮೋತ್ಸವದಿಂದ ಬಿಜೆಪಿಯೊಳಗೆ ತಲ್ಲಣ ಆರಂಭ: ಡಾ.ಎಚ್.ಸಿ.ಮಹದೇವಪ್ಪ

ಸಿದ್ದರಾಮೋತ್ಸವದಿಂದ ಬಿಜೆಪಿಯೊಳಗೆ ತಲ್ಲಣ ಆರಂಭ: ಡಾ.ಎಚ್.ಸಿ.ಮಹದೇವಪ್ಪ

0

ಮೈಸೂರು(Mysuru): ಸಿದ್ದರಾಮೋತ್ಸವದ ಯಶಸ್ಸಿನಿಂದಾಗಿ ಬಿಜೆಪಿಯೊಳಗೆ ತಲ್ಲಣಗಳೇ ಆರಂಭವಾಗಿವೆ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಇಂದು‌ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಯಶಸ್ಸಿನಿಂದ ಬಿಜೆಪಿಯವರಿಗೆ ಉರಿ ಶುರುವಾಗಿದೆ ಎಂದು ಹೇಳಿದ್ದಾರೆ.

ನಮ್ಮ ನಿರೀಕ್ಷೆಗೂ ಮೀರಿ ಕಾರ್ಯಕ್ರಮ ಯಶಸ್ವಿಯಾಗಿದೆ. ಹಣ ಕೊಟ್ಟರೂ ಅಷ್ಟು ಜನರನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ದುಡ್ಡು ಕೊಟ್ಟು ಜನ ಕರೆಸಿದರೆ ಅರ್ಧ ಗಂಟೆಯಲ್ಲಿ ಅವರು ವಾಪಸ್ ಹೋಗುತ್ತಾರೆ. ನಮ್ಮ ಕಾರ್ಯಕ್ರಮಕ್ಕೆ ಜನರು ತಾವಾಗಿಯೇ ಬಂದರು. 15 ಲಕ್ಷಕ್ಕೂ ಹೆಚ್ಚು ಜನರು ಯಾವುದೇ ನಿರೀಕ್ಷೆ ಇಲ್ಲದೆ ಭಾಗವಹಿಸಿದ್ದರು ಎಂದರು.

ಅದೊಂದು ಚಾರಿತ್ರಿಕ ಕಾರ್ಯಕ್ರಮ. ಅದರ ಯಶಸ್ಸಿನಿಂದ ಕಾಂಗ್ರೆಸ್ ಮೈಮರೆಯಬಾರದು. ಎಲ್ಲರೂ ಒಗ್ಗಟ್ಟಿನಿಂದ ಮುಂಬರುವ ಚುನಾವಣೆಗೆ ಸಜ್ಜಾಗಬೇಕು ಎಂದರು.

ಸ್ವಾತಂತ್ರ್ಯದ ಆಶಯಗಳ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಅವರಿಗೆ ಬೇಕಾಗಿರುವುದು ಸರ್ವಾಧಿಕಾರತ್ವ ಮಾತ್ರ. ಒಂದು ಧರ್ಮ, ಒಂದೇ ಭಾಷೆ ಹಾಗೂ ಒಬ್ಬರದ್ದೇ ಆಡಳಿತ ಎಂಬುದು ಪ್ರಧಾನಿ ನರೇಂದ್ರ ಮೋದಿ ನಿಲುವು. ಇಂಥವರಿಂದ ಸ್ವಾತಂತ್ರ್ಯದ ಆಶಯ ಈಡೇರಲು ಸಾಧ್ಯವಿಲ್ಲ ಎಂದು ದೂರಿದರು.

ರಾಷ್ಟ್ರಧ್ವಜ ತಯಾರಿಕೆಗೆ ತನ್ನದೆ ಆದ ನಿಯಮ ಹಾಗೂ ಕ್ರಮ ಇದೆ. ಅದನ್ನೆಲ್ಲಾ ಮುರಿದು ಬಿಜೆಪಿಯವರು ಬಾವುಟಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದರು.