ಮನೆ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಹೆಚ್ಚಾಗಿದೆ: ಸಿದ್ದರಾಮಯ್ಯ

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಹೆಚ್ಚಾಗಿದೆ: ಸಿದ್ದರಾಮಯ್ಯ

0

ಮೈಸೂರು(Mysuru): ರಾಷ್ಟ್ರಧ್ವಜವನ್ನು ಖಾದಿ ಅಥವಾ ರೇಷ್ಮೆಯಲ್ಲೇ ಮಾಡಬೇಕು. ಆದರೆ ಚೀನಾದಿಂದ ಆಮದು ಮಾಡಿಸಿಕೊಳ್ಳಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಚೀನಾದಿಂದ ಆಮದು ಹೆಚ್ಚಾಗಿದೆ

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಧ್ವಜಸಂಹಿತೆ ತಿದ್ದುಪಡಿ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ರಾಷ್ಟ್ರಧ್ವಜವನ್ನು ಚೀನಾದಿಂದ ಆಮದು ಮಾಡಿಸಿಕೊಳ್ಳುತ್ತಿದ್ದಾರೆ. ಹಾಗಾದರೆ ಅತ್ಮನಿರ್ಭರ ಭಾರತ ಎನ್ನುವುದು ಎಲ್ಲಿ ಯಶಸ್ವಿಯಾಯಿತು? ಎಂದು ವ್ಯಂಗ್ಯವಾಗಿ ಕೇಳಿದರು.

ಹರ್ ಘರ್ ತಿರಂಗ ಕಾರ್ಯಕ್ರಮವು ಬಿಜೆಪಿಯವರ ನಾಟಕದ ಉಪಕ್ರಮ. ಬಿಜೆಪಿಯವರು ರಾಷ್ಟ್ರ ಬಾವುಟಕ್ಕೆ ಗೌರವ ಕೊಟ್ಟವರಲ್ಲ. ಅವರು ರಾಷ್ಟ್ರಗೀತೆ, ಬಾವುಟವನ್ನು ವಿರೋಧಿಸುತ್ತಿದ್ದವರು. ಅವರಿಗೆ ನಮ್ಮಬಾವುಟದ ಮೇಲೆ ನಂಬಿಕೆ ಇಲ್ಲ. ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ರಾಜಕೀಕರಣ ಮಾಡಲು ಬಿಜೆಪಿ ಪಕ್ಷದವರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ದಾವಣಗೆರೆಯಲ್ಲಿ ನಡೆದ ನನ್ನ ಅಮೃತ ಮಹೋತ್ಸವದಲ್ಲಿ ಸೇರಿದ್ದ ಜನಸ್ತೋಮ ನೋಡಿ ಬಿಜೆಪಿಯವರಿಗೆ ಭಯ ಬಂದಿದೆ. ಆದ್ದರಿಂದಲೇ ಭಯ ಬಂದಿರುವುದರಿಂದಲೇ ಇನ್ನೂ ವ್ಯರ್ಥ ಟೀಕೆಗಳನ್ನು ‌ಮಾಡುತ್ತಿದ್ದಾರೆ ಎಂಟು ಟೀಕಿಸಿದರು.

ಅಹಿಂದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಸಿರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಆ ಮಾತಿನಲ್ಲಿ ಸತ್ಯವಿರುತ್ತದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಹಾಗೂ ದಲಿತರ ಮತಗಳು ಕಾಂಗ್ರೆಸ್ ಪರವಾಗಿ ಇರುತ್ತವೆ. ಆ ಕಾರಣದಿಂದ ಆ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಕೆಲಸ ನಡೆದಿರಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಎಂದು ಪ್ರತಿಕ್ರಿಯಿಸಿದರು.

ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ. ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಆ ಬಗ್ಗೆ ಪ್ರಕಟಿಸುತ್ತೇನೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದಾಕ್ಷಣ ಅಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದರ್ಥವಲ್ಲ. ಪಕ್ಷದ ನಾಯಕನಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡುತ್ತೇನೆ ಎಂದು ಪ್ರತಿಕ್ರಿಯಿಸಿದರು.