ಮನೆ ಮನರಂಜನೆ ಆ.26ಕ್ಕೆ ʻವಿಕಿಪೀಡಿಯʼಸಿನಿಮಾ ತೆರೆಗೆ

ಆ.26ಕ್ಕೆ ʻವಿಕಿಪೀಡಿಯʼಸಿನಿಮಾ ತೆರೆಗೆ

0

ಬೆಂಗಳೂರು (Bengaluru): ಯಶವಂತ್ ಅಭಿನಯದ ‘ವಿಕಿಪೀಡಿಯ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಆ. 26ಕ್ಕೆ ಚಿತ್ರ ಬಿಡುಗಡೆ ಆಗಲಿದೆ.

ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ವಿಕಿಪೀಡಿಯ ಸಿನಿಮಾಗೆ ಸೋಮು ಹೊಯ್ಸಳ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಇದು ಇವರಿಗೆ ಚೊಚ್ಚಲ ಸಿನಿಮಾ. ಡ್ರಾಮಾ, ಎಮೋಷನಲ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ಸಿನಿಮಾದಲ್ಲಿದೆ.

ಜಗತ್ತಿನಲ್ಲಿ ಎರಡು ರೀತಿ ಜನ ಇದ್ದಾರೆ. ಒಂದು ವಿಕಿಪೀಡಿಯದಲ್ಲಿ ಕಾಣಿಸುವವರು. ಇನ್ನೊಂದು ಅಲ್ಲಿ ಇಲ್ಲದಿರುವವರು. ವಿಕಿಪೀಡಿಯದಲ್ಲಿ ಇಲ್ಲದೇ ಇರುವ ವಿಕಾಸ್ (ಯಶವಂತ್‌) ತನ್ನ ಕಥೆ ಹೇಳಲು ಈ ಚಿತ್ರದ ಮೂಲಕ ಬರುತ್ತಿದ್ದಾನೆ. ಯಶವಂತ್ ಅದ್ಭುತವಾಗಿ ನಟಿಸಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ.

ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಎಚ್‌.ಕೆ. ಅವರ ಛಾಯಾಗ್ರಹಣ, ರಾಕೇಶ್ ಅವರ ಸಂಗೀತ, ರವಿಚಂದ್ರನ್ ಸಿ. ಸಂಕಲನವಿದೆ. ರಫ್ ಕಟ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿರುವ ಸಿನಿಮಾಗೆ ಯು/ಎ ಪ್ರಮಾಣಪತ್ರ ಸಿಕ್ಕಿದೆ.