ಮನೆ ಸುದ್ದಿ ಜಾಲ ಆಯುಷ್ಮಾನ್ ಯೋಜನೆಯಡಿ ಕುಟುಂಬಕ್ಕೆ 5 ಲಕ್ಷ ರೂ.ವಿಮೆ: ಶಾಸಕ ಎಲ್.ನಾಗೇಂದ್ರ

ಆಯುಷ್ಮಾನ್ ಯೋಜನೆಯಡಿ ಕುಟುಂಬಕ್ಕೆ 5 ಲಕ್ಷ ರೂ.ವಿಮೆ: ಶಾಸಕ ಎಲ್.ನಾಗೇಂದ್ರ

0

ಮೈಸೂರು (Mysuru): ಕರ್ನಾಟಕ ಸರ್ಕಾರ ಆಯುಷ್ಮಾನ್ ಯೋಜನೆಯಲ್ಲಿ ಸುಮಾರು 60 ರಿಂದ 70 ಕೋಟಿ ಜನರಿಗೆ ಪ್ರತಿ ಕುಟುಂಬಕ್ಕೂ 5 ಲಕ್ಷ ರೂ. ವಿಮೆಯನ್ನು ಮಾಡಿಕೊಟ್ಟಿದೆ ಎಂದು ಶಾಸಕರಾದ ಎಲ್.ನಾಗೇಂದ್ರ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ʻರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮʼವನ್ನು ಉದ್ಘಾಟಿಸಿ ಮಾತನಾಡಿದ ಅವರು, 1 ವರ್ಷದಿಂದ ಮಕ್ಕಳಿಂದ 19 ವರ್ಷದ ಹದಿಹರೆಯದವರಿಗೆ ಜಂತುಹುಳು ನಿವಾರಣೆ ಮಾಡಲಿಕ್ಕೆ ಮಾತ್ರೆ ಕೊಡುವುದರ ಮೂಲಕ ಸರ್ಕಾರ ಜವಾಬ್ದಾರಿಯನ್ನು ನಿರ್ವಹಿಸುತ್ತಿದೆ. ಈ ಕಾರ್ಯದಲ್ಲಿ ವೈದ್ಯ ತಂಡ ಬಹಳ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಮಕ್ಕಳಿಗೆ ರೋಗನಿವಾರಣೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಹೆಚ್.ಕೆ. ಪ್ರಸಾದ್ ಅವರು ಮಾತನಾಡಿ, ಆರೋಗ್ಯವೇ ಭಾಗ್ಯ. ಆರೋಗ್ಯ ಇಲಾಖೆ ಹಾಗೂ ಎಲ್ಲಾ ಸರ್ಕಾರದ ಇಲಾಖೆಗಳು ಜೊತೆ ಕೈಜೋಡಿಸಿ ಜನರ ಆರೋಗ್ಯ ಕಾಪಾಡುವ ಮಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾಪೌರರಾದ ಸುನಂದಾ ಪಾಲನೇತ್ರ, ನಗರಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಉದಯಶಂಕರ್ ಮತ್ತಿತರರು ಉಪಸ್ಥಿತರಿದ್ದರು.