ಗಡಿ ಭದ್ರತಾ ಪಡೆಯು 1312 ಹೆಡ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳನ್ನು ರೇಡಿಯೋ ಆಪರೇಟಿಂಗ್ ಮತ್ತು ರೇಡಿಯೋ ಮೆಕ್ಯಾನಿಕಲ್ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ. ಒಟ್ಟು ಹುದ್ದೆಗಳ ಪೈಕಿ 982 ಹುದ್ದೆಗಳನ್ನು ರೇಡಿಯೋ ಆಪರೇಟರ್ ಹೆಚ್ಸಿ ಆಗಿ, ಉಳಿದ 330 ಹುದ್ದೆಗಳನ್ನು ರೇಡಿಯೋ ಮೆಕ್ಯಾನಿಕ್ ಹೆಚ್ಸಿ ಹುದ್ದೆಗಳಾಗಿ ಭರ್ತಿ ಮಾಡಲಾಗುತ್ತದೆ.
ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ಅರ್ಜಿಗೆ ಆನ್ಲೈನ್ ಲಿಂಕ್ ಅನ್ನು ಆಗಸ್ಟ್ 20ರಂದು ಬಿಡುಗಡೆ ಮಾಡಲಾಗುತ್ತದೆ. ಸೆಪ್ಟೆಂಬರ್ 28 ರವರೆಗೆ ಅರ್ಜಿಗೆ ಅವಕಾಶ ನೀಡಲಾಗುತ್ತದೆ.
ಗಡಿ ಭದ್ರತಾ ಪಡೆ ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಪೇ ಮೆಟ್ರಿಕ್ಸ್ ಲೆವೆಲ್ 4, ರೂ.25,500 – 81,100 ಸ್ಕೇಲ್ ವೇತನ ಶ್ರೇಣಿಗೆ ನಿಯೋಜಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 20-08-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-09-2022
ಹುದ್ದೆಗಳ ವಿವರ
ಬಿಎಸ್ಎಫ್ ಹೆಡ್ ಕಾನ್ಸ್ಟೇಬಲ್ ರೇಡಿಯೋ ಆಪರೇಟರ್ : 982
ಬಿಎಸ್ಎಫ್ ಹೆಡ್ ಕಾನ್ಸ್ಟೇಬಲ್ ರೇಡಿಯೋ ಮೆಕ್ಯಾನಿಕ್ : 330
ಬಿಎಸ್ಎಫ್ ಹೆಡ್ ಕಾನ್ಸ್ಟೇಬಲ್ ರೇಡಿಯೋ ಆಪರೇಟರ್ ವಿದ್ಯಾರ್ಹತೆ
10th ಪಾಸ್ ಜತೆಗೆ ಐಟಿಐ (2 ವರ್ಷ) ಅನ್ನು ರೇಡಿಯೋ ಮತ್ತು ಟೆಲಿವಿಷನ್ ಅಥವಾ ಇಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್ ಅಥವಾ ಡಾಟಾ ಆಪರೇಷನ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಜೆನೆರಲ್ ಇಲೆಕ್ಟ್ರಾನಿಕ್ಸ್ ಅಥವಾ ಡಾಟಾ ಎಂಟ್ರಿ ಆಪರೇಟರ್ ಟ್ರೇಡ್ನಲ್ಲಿ ಪಾಸ್ ಮಾಡಿರಬೇಕು.
ಬಿಎಸ್ಎಫ್ ಹೆಡ್ ಕಾನ್ಸ್ಟೇಬಲ್ ರೇಡಿಯೋ ಮೆಕ್ಯಾನಿಕ್ ವಿದ್ಯಾರ್ಹತೆ
10th ಪಾಸ್ ಜತೆಗೆ ಐಟಿಐ (2 ವರ್ಷ) ಅನ್ನು ರೇಡಿಯೋ ಮತ್ತು ಟೆಲಿವಿಷನ್ ಅಥವಾ ಇಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟಂಟ್ ಅಥವಾ ಡಾಟಾ ಆಪರೇಷನ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಜೆನೆರಲ್ ಇಲೆಕ್ಟ್ರಾನಿಕ್ಸ್ ಅಥವಾ ಡಾಟಾ ಎಂಟ್ರಿ ಆಪರೇಟರ್ ಅಥವಾ ಫಿಟ್ಟರ್ ಅಥವಾ ಇನ್ಫಾರ್ಮೇಷನ್ ಟೆಕ್ನಾಲಜಿ ಮತ್ತು ಇಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಮೇಂಟೆನೆನ್ಸ್ ಅಥವಾ ಕಂಪ್ಯೂಟರ್ ಹಾರ್ಡ್ವೇರ್ ಅಥವಾ ನೆಟ್ವರ್ಕ್ ಟೆಕ್ನೀಷಿಯನ್ ಅಥವಾ ಮೆಕಾಟ್ರಾನಿಕ್ಸ್ ಟ್ರೇಡ್ನಲ್ಲಿ ಪಾಸ್ ಮಾಡಿರಬೇಕು.
ಈ ಮೇಲಿನ ವಿದ್ಯಾರ್ಹತೆಗಳನ್ನು ಕನಿಷ್ಠ ಶೇಕಡ 60 ಅಂಕಗಳೊಂದಿಗೆ ಪಾಸ್ ಮಾಡಿರಬೇಕು.
ಬಿಎಸ್ಎಫ್ ಹೆಡ್ಕಾನ್ಸ್ಟೇಬಲ್ ಆರ್ಒ, ಆರ್ಎಂ ಹುದ್ದೆಗಳ ವೇತನ ಶ್ರೇಣಿ : ರೂ.25,500 – 81,100
ಒಎಂಆರ್ ಆಧಾರಿತ ಸ್ಕ್ರೀನಿಂಗ್ ಟೆಸ್ಟ್: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಪಿಎಸ್ಟಿ/ಪಿಇಟಿ/ಡಾಕ್ಯುಮೆಂಟೇಶನ್ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ವಿವರಣಾತ್ಮಕ ಬರವಣಿಗೆ ಪರೀಕ್ಷೆ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಅಂತಿಮ ವೈದ್ಯಕೀಯ ಪರೀಕ್ಷೆ: ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು https://rectt.bsf.gov.in