ಬೆಂಗಳೂರು(Bengaluru): ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನ ಅಸಿಸ್ಟೆಂಟ್ ಕಮಿಷನರ್ ಅವರು ಧ್ವಜಾರೋಹಣ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.
ಮೈದಾನದಲ್ಲಿ ಧ್ವಜಾರೋಹಣ ಬಗ್ಗೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಅವರು, ಈ ಮೈದಾನದ ಜಾಗ ಮೂಲತಃ ಕಂದಾಯ ಇಲಾಖೆಗೆ ಸೇರಿದೆ. ಯಾರಿಗೂ ಹಸ್ತಾಂತರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಆಗಸ್ಟ್ 15ರಂದು ಧ್ವಜಾರೋಹಣ ಕಾರ್ಯಕ್ರಮದಂದು ಸ್ಥಳೀಯ ಶಾಸಕ ಮತ್ತು ಸಂಸದರನ್ನು ಆಹ್ವಾನಿಸಲಾಗುವುದು ಮತ್ತು ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುವುದು ಎಂದು ತಿಳಿಸಿದರು.
Saval TV on YouTube