ಮೈಸೂರು(Mysuru): ಜಿಲ್ಲಾ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ವತಿಯಿಂದ ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್ ನೇತೃತ್ವದಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಯಿತು.
ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಾದ ಕಾಮಾಕ್ಷಮ್ಮ, ವೇದಾಂಬ, ಶಶಿಕಲ, ಗಿರಿಜಾ ಅಶ್ವತ್, ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ನಾರಾಯಣ್, ಪ್ರೇಮಾವತಿ, ಲಿಂಗಯ್ಯ, ಸೋಮಶೇಖರ್, ರಂಗ ಶೆಟ್ಟಿ, ವೈ ಸಿ ರೇವಣ್ಣ, ಮರಿಯಮ್ಮ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಮಾತನಾಡಿದ ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಕರೆಯ ಮೇರೆಗೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಹೋರಾಟಗಾರರು ಪಾಲ್ಗೊಂಡು ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಶ್ರಮಿಸಿದ್ದಾರೆ. ಅವರ ಹೋರಾಟ, ದೇಶಸೇವೆ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸಂಚಾಲಕರಾದ ಯೋಗಾನಂದ, ಕಾರ್ಯದರ್ಶಿಗಳಾದ ಶೇಷಾದ್ರಿ ರವರು ಹಾಗೂ ಆಶೀರ್ವಾದ ಹೋಟೆಲ್ ಉದ್ಯಮಿಗಳಾದ ಸಿದ್ದಿ ರವರು, ಹಾಗೂ ಬಿಜೆಪಿ ಕಾರ್ಯಕರ್ತರಾದ ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ಗೋಪಿ, ಆನಂದ, ಪಾಪಣ್ಣ, ನರಸಿಂಹ ಪ್ರಸಾದ್, ಹಾಗೂ ರೇಣುಕಾ, ಜ್ಯೋತಿ, ಸುಕನ್ಯಾ, ಕೀರ್ತನ, ಮೇಘನ, ಮಾನ್ಯ, ಧನುಷ್ ಭಾಗವಹಿಸಿದ್ದರು.