ಕೋಲಾರ(Kolar): 75 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಕೋಲಾರದಲ್ಲಿ ದೇಶದಲ್ಲಿಯೇ ಅತಿ ದೊಡ್ಡದಾದ ಧ್ವಜವನ್ನು ನಿರ್ಮಾಣ ಮಾಡಲಾಗಿದ್ದು, ಈ ಬೃಹತ್ ಧ್ವಜ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದೆ.
ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಕಾರ್ಮಿಕರು ಈ ಧ್ವಜ ನಿರ್ಮಾಣ ಮಾಡಿದ್ದಾರೆ.
ಈ ಬೃಹತ್ ಧ್ವಜ 204 ಅಡಿ ಉದ್ದ 630 ಅಡಿ ಅಗಲವಿದ್ದು, ಒಟ್ಟು 1.30 ಲಕ್ಷ ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಧ್ವಜ ಮೇಲಿನ ಅಶೋಕ ಚಕ್ರ 60-60 ಅಂದರೆ 3400 ಚದರಡಿ ವಿಸ್ತೀರ್ಣ ಹೊಂದಿದೆ. ಇನ್ನು ಈ ಧ್ವಜ ನಿರ್ಮಾಣಕ್ಕಾಗಿ ಸುಮಾರು 13,000 ಮೀಟರ್ ಬಟ್ಟೆ ಬಳಸಲಾಗಿದೆ. ಇದು ಸುಮಾರು 3 ಟನ್ ನಷ್ಟ ತೂಕ ಹೊಂದಿದೆ.
ಇಂದು ಕೋಲಾರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಬೃಹತ್ ಧ್ವಜವನ್ನು 2000 ಜನ ಹಿಡಿದು ಅನಾವರಣ ಮಾಡಿದ್ದಾರೆ.