ಮನೆ ರಾಜ್ಯ ಬೆಳೆಹಾನಿ ಪ್ರದೇಶಗಳಿಗೆ ಸಚಿವ ಕೆ.ಗೋಪಾಲಯ್ಯ ಭೇಟಿ, ಪರಿಶೀಲನೆ

ಬೆಳೆಹಾನಿ ಪ್ರದೇಶಗಳಿಗೆ ಸಚಿವ ಕೆ.ಗೋಪಾಲಯ್ಯ ಭೇಟಿ, ಪರಿಶೀಲನೆ

0

ಹಾಸನ (Hassan): ಅತಿವೃಷ್ಟಿಯಿಂದ ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವ ಬೆಳೆಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಡೋಣಿಗಾಲ್ ಗ್ರಾಮಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ.‌ಒಂದೆರಡು ದಿನಗಳಲ್ಲಿ ಹಾನಿ ನೋಡಲು ಸಾಧ್ಯವಿಲ್ಲ. ‌ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದರು.

ಅಡಿಕೆ, ಮೆಣಸು,ಕಾಫಿ ಸೇರಿದಂತೆ ಅಪಾರ ಬೆಳೆ ನಷ್ಟವಾಗಿದೆ.‌ಇದನ್ನು ಖುದ್ದಾಗಿ ನೋಡಬೇಕೆಂದು ಹಲವೆಡೆ ಪರಿಶೀಲನೆ ನಡೆಸಲಾಗುತ್ತಿದೆ. ಅಧಿಕಾರಿಗಳಿಂದ ವರದಿ ಪಡೆದ ನಂತರ ಸಿಎಂ ಜೊತೆ ಮಾತನಾಡಿ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಳೆದ 40- ವರ್ಷದಿಂದ ಈ ರೀತಿಯ ಮಳೆ ನೋಡಿರಲಿಲ್ಲ. ಇದೀಗ ಮಳೆ ಸಂಪೂರ್ಣ ನಿಂತಿದ್ದು ಆಧಿಕಾರಿಗಳಿಂದ ಕೃಷಿ, ತೋಟಗಾರಿಕೆ ಸೇರಿದಂತೆ ಇತರೆ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟದ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸಚಿವ ಕೆ.ಗೋಪಾಲಯ್ಯ ಉತ್ತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಗಿರೀಶ್, ಕೃಷಿ ಹಾಗೂ ತೋಟಗಾರಿಕೆ‌ ಇಲಾಕೆ ಉಪನಿರ್ಧೇಶಕರು ಉಪಸ್ಥಿತರಿದ್ದರು.