ಪಂಜಾಬ್: ಪಂಜಾಬ್ ಚುನಾವಣೆ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಛನ್ನಿಗೆ ಇಡಿ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಸಿಎಂ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ತಡರಾತ್ರಿ ಬಂಧಿಸಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಸಂಬಂಧಿತ ಕೇಸ್ನಲ್ಲಿ ಭೂಪೇಂದ್ರ ಸಿಂಗ್ ಮನೆ, ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ನಿನ್ನೆ ಸಂಜೆ ಅವರನ್ನು ಬಂಧಿಸಿದ್ದು, ಇಂದು ಸಿಬಿಐ ಕೋರ್ಟ್ಗೆ ಹಾಜರುಪಡಿಸಲಿದೆ.
ಪಂಜಾಬ್ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಇಂಥದ್ದೊಂದು ಬೆಳವಣಿಗೆ ತುಂಬ ಮಹತ್ವದ್ದೆನಿಸಿದೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಡಿ ಇ.ಡಿ. ಕಳೆದ ತಿಂಗಳು ಪಂಜಾಬ್ನ ವಿವಿಧೆಡೆ ರೇಡ್ ಮಾಡಿ, ಸುಮಾರು 10 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದ್ದು, ಅದರಲ್ಲಿ 8 ಕೋಟಿ ರೂಪಾಯಿ ಚರಣಜಿತ್ ಸಿಂಗ್ ಛನ್ನಿಯವರಿಗೆ ಸೇರಿದ್ದಾಗಿದೆ.
ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಈ ಘಟನೆ ದೊಡ್ಡ ಹಿನ್ನಡೆಯಾಗಿದೆ.