ಮನೆ ರಾಜ್ಯ ರಾಯಣ್ಣನ ದೇಶಪ್ರೇಮ ಯುವಜನರಿಗೆ ಪ್ರೇರಣೆಯಾಗಲಿ: ಗಿರೀಶ್

ರಾಯಣ್ಣನ ದೇಶಪ್ರೇಮ ಯುವಜನರಿಗೆ ಪ್ರೇರಣೆಯಾಗಲಿ: ಗಿರೀಶ್

0

ಮೈಸೂರು(Mysuru): ಸಂಗೊಳ್ಳಿ ರಾಯಣ್ಣನ ದೇಶಪ್ರೇಮ, ಆದರ್ಶ, ತತ್ವ, ಸಂದೇಶಗಳು ಇಂದಿನ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಬೇಕು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ತಿಳಿಸಿದರು.

ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ವತಿಯಿಂದ  ಸಂಗೊಳ್ಳಿ ರಾಯಣ್ಣ ಜಯಂತಿಯ ಆಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬ್ರಿಟೀಷರ ಕುಟಿಲ ನೀತಿಯ ವಿರುದ್ಧ ಯುವ ಸೇನೆ ಕಟ್ಟಿ ಹೋರಾಡಿ, ಪ್ರಾಣವನ್ನೇ ಬಲಿಕೊಟ್ಟ ರಾಯಣ್ಣನ ಜನ್ಮದಿನ ಆಚರಿಸುವುದು ಅವಶ್ಯಕ. ತ್ಯಾಗ, ಬಲಿದಾನಕ್ಕೆ ಮತ್ತೊಂದು ಹೆಸರೇ ರಾಯಣ್ಣ. ಇಂತಹ ಮಹನೀಯರ ಬಗ್ಗೆ ಯುವ ಜನಾಂಗ ಅರಿತು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಗೊಳ್ಳಿ ರಾಯಣ್ಣ ಸಮುದಾಯದ ಎಲ್ಲ ವರ್ಗಗಳ ಜನರನ್ನು ಒಟ್ಟುಗೂಡಿಸಿ, ಯುವಸೈನ್ಯ ಕಟ್ಟಿ ಬ್ರಿಟೀಷರ ವಿರುದ್ಧ ರಣ ಕಹಳೆಯನ್ನೂದಿದ ವೀರಯೋಧ. ಕಿತ್ತೂರು ರಾಣಿ ಚೆನ್ನಮ್ಮನ ಪರಮ ಬಂಟನಾಗಿ, ಪರಕೀಯರ ವಿರುದ್ಧ ಹೋರಾಡಿದವರು ವಿದ್ಯಾರ್ಥಿಗಳು ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು. ದೇಶದ ಶಕ್ತಿಯಾದ ವಿದ್ಯಾರ್ಥಿಗಳು ದೇಶಸೇವೆ ಮಾಡಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಸದಾಶಿವ, ಸೂರಜ್, ಗಣೇಶ್ ಭಾವಸಾರ್ , ಸುಚೀಂದ್ರ, ಚಂದ್ರು, ಕಿರಣ್, ಚಂದ್ರು ಹಾಗೂ ಇನ್ನಿತರರು ಹಾಜರಿದ್ದರು.