ಮನೆ ಉದ್ಯೋಗ ಗಡಿ ರಸ್ತೆ ಸಂಸ್ಥೆಯಿಂದ 246 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಗಡಿ ರಸ್ತೆ ಸಂಸ್ಥೆಯಿಂದ 246 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

10ನೇ ತರಗತಿ, ಸೆಕೆಂಡ್​ ಪಿಯು, ಐಟಿಐ ಆದವರಿಗೆ ಉದ್ಯೋಗಾವಕಾಶಗಳು ಲಭ್ಯವಿದೆ. ಗಡಿ ರಸ್ತೆ ಸಂಸ್ಥೆಯೂ (ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್) ಇದೀಗ ವಿವಿಧ ಹುದ್ದೆಗಳಾದ ಡ್ರ್ಯಾಫ್ಟ್‌ ಮನ್, ಸೂಪರ್‌ವೈಸರ್, ಸೂಪರ್‌ವೈಸರ್ ಸಿಫೆರ್, ಸೂಪರ್‌ವೈಸರ್ ಸ್ಟೋರ್ಸ್‌, ಹಿಂದಿ ಟೈಪಿಸ್ಟ್‌, ಆಪರೇಟರ್, ಇಲೆಕ್ಟ್ರೀಷಿಯನ್, ವೆಲ್ಡರ್, ಮಲ್ಟಿಸ್ಕಿಲ್ಡ್‌ ವರ್ಕರ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.
ಸಂಸ್ಥೆಯ ಹೆಸರು:  ಬಾರ್ಡರ್ ಸೆಕ್ಯೂರಿಟಿ ಆರ್ಗನೈಸೇಶನ್
ಹುದ್ದೆಯ ಹೆಸರು:  ವಿವಿಧ ಹುದ್ದೆಗಳು
ಹುದ್ದೆಗಳ ಸಂಖ್ಯೆ ಒಟ್ಟು 246 ಹುದ್ದೆಗಳು
ಶೈಕ್ಷಣಿಕ ಅರ್ಹತೆ: ಮಲ್ಟಿ ಸ್ಕಿಲ್ಡ್‌ ವರ್ಕರ್ (ಮೇಷನ್): ಎಸ್‌ಎಸ್‌ಎಲ್‌ಸಿ ಜತೆಗೆ, ಬಿಲ್ಡಿಂಗ್ ಕಂಸ್ಟ್ರಕ್ಷನ್‌ ಸರ್ಟಿಫಿಕೇಟ್‌ ಹೊಂದಿರಬೇಕು.
ಮಲ್ಟಿ ಸ್ಕಿಲ್ಡ್‌ ವರ್ಕರ್ (ನರ್ಸಿಂಗ್ ಅಸಿಸ್ಟಂಟ್): ದ್ವಿತೀಯ ಪಿಯು ವಿಜ್ಞಾನ ಜತೆಗೆ, ಒಂದು ವರ್ಷದ ನರ್ಸಿಂಗ್ ತರಬೇತಿ ಸರ್ಟಿಫಿಕೇಟ್‌ ಹೊಂದಿರಬೇಕು.
ಮಲ್ಟಿ ಸ್ಕಿಲ್ಡ್‌ ವರ್ಕರ್ (ಡ್ರೈವರ್ ಇಂಜಿನ್ ಸ್ಟೇಟಿಕ್): ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಅನ್ನು ಹುದ್ದೆಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಪಾಸ್ ಮಾಡಿರಬೇಕು.
ಸ್ಟೋರ್ ಕೀಪರ್ ಟೆಕ್ನಿಕಲ್ : ಯಾವುದೇ ವಿಷಯದಲ್ಲಿ ಪಿಯುಸಿ ಜತೆಗೆ ಸ್ಟೋರ್ ಕೀಪಿಂಗ್ ಅನುಭವ ಇರಬೇಕು.
– ಇತರೆ ಹುದ್ದೆಗಳಿಗೆ ಸಹ ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ಅನ್ನು ಪಾಸ್ ಮಾಡಿರಬೇಕು. ವಿದ್ಯಾರ್ಹತೆ ಕುರಿತು ಇತರೆ ಹೆಚ್ಚಿನ ಮಾಹಿತಿಗೆ ಅಧಿಕೃತ ಡೀಟೇಲ್ಡ್‌ ನೋಟಿಫಿಕೇಶನ್‌ ಅನ್ನು ಓದಲು ತಿಳಿಸಲಾಗಿದೆ.
ವಯಸ್ಸಿನ ಮಿತಿ: ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ.

ವಯಸ್ಸಿನ ಸಡಿಲಿಕೆ: ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಇಮೇಲ್ವಿಳಾಸhttp://www.bro.gov.in/

ಆನ್ಲೈನ್ಅಪ್ಲಿಕೇಶನ್ಸಲ್ಲಿಸಲು ಬೇಕಾದ ಮಾಹಿತಿ/ ದಾಖಲೆಗಳು
ಹೆಸರು

ಇ-ಮೇಲ್ ವಿಳಾಸ

ಮೊಬೈಲ್ ನಂಬರ್

ಜನ್ಮ ದಿನಾಂಕ

ಆಧಾರ್ ಕಾರ್ಡ್

ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ

ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ (ಐಟಿಐ)

ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳನ್ನು ನಿಗಧಿತ ವಿದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ಮೂಲ ದಾಖಲೆಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

 ಅರ್ಜಿ ಸಲ್ಲಿಕೆ ಪ್ರಕ್ರಿಯೆ: ನೇಮಕಾತಿ ಅಧಿಸೂಚನೆ ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ರೆಸ್ಯೂಮೆ ಜೊತೆ ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಯಾವುದೇ ಅನುಭವಗಳನ್ನು ಅರ್ಜಿ ಜೊತೆ ಲಗತ್ತಿಸಿ.

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ನಂತರ ಮೇಲಿನ ​ ವಿಳಾಸಕ್ಕೆ ನಿಗದಿತ ದಿನಾಂಕದ ಮುನ್ನ ಕಳುಹಿಸಬೇಕು.