ಮನೆ ರಾಜಕೀಯ ಬಿಜೆಪಿಯ ವೈಫಲ್ಯತೆ ಮುಚ್ಚಿ ಹಾಕಲು ಅನಗತ್ಯ ಗಲಭೆ ಸೃಷ್ಟಿ: ಯತೀಂದ್ರ ಸಿದ್ದರಾಮಯ್ಯ

ಬಿಜೆಪಿಯ ವೈಫಲ್ಯತೆ ಮುಚ್ಚಿ ಹಾಕಲು ಅನಗತ್ಯ ಗಲಭೆ ಸೃಷ್ಟಿ: ಯತೀಂದ್ರ ಸಿದ್ದರಾಮಯ್ಯ

0

ಟಿ.ನರಸೀಪುರ(T.narasipura): ಬಿಜೆಪಿಯ ವೈಫಲ್ಯತೆಯನ್ನು ಮುಚ್ಚಿ ಹಾಕಲು ಅನಗತ್ಯ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು  ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಶಾಸಕ ಯತೀಂದ್ರ ಸಿದ‍್ಧರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.
ಟಿ.ನರಸೀಪುರದಲ್ಲಿ ಇಂದು ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮು ದ್ವೇಷ ಹೆಚ್ಚಾಗಿ ಹರಡುತ್ತಿದೆ. ಒಬ್ಬರೊನ್ನಬ್ಬರು ಸಾಯಿಸುವುದು ಕೊಲೆ ಮಾಡುವುದು ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಬದಲು ಮುಖ್ಯಮಂತ್ರಿಗಳೇ ಸ್ವತಃ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾವರ್ಕರ್ ಏನು ಸ್ವಾತಂತ್ರ ಹೋರಾಟಗಾರರಲ್ಲ ಸಾವರ್ಕರ್ ಒಬ್ಬ ಮೂಲಭೂತವಾದಿ. ಮುಸ್ಲಿಂರನ್ನು ಸಾವರ್ಕರ್ ಯಾವತ್ತಿಗೂ ಭಾರತೀಯರು ಎಂದು ಒಪ್ಪಿಕೊಂಡಿರಲಿಲ್ಲ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಎರಡನೇ ದರ್ಜೆಯ ಪ್ರಜೆಗಳಗಿ ಇರಬೇಕು. ಹಿಂದೂ ರಾಷ್ಟ್ರವನ್ನ,ಹಿಂದೂ ಅಧಿಕಾರ ಒಪ್ಪಿಕೊಂಡು ಎರಡನೇ ದರ್ಜೆ ನಾಗರೀಕರಾಗಿ ಇರಬೇಕೆಂದು ಹೇಳಿದವರು. ಸಾವರ್ಕರ್ ಅನ್ಯಮತ ದ್ವೇಷಿ. ಹೀಗಾಗಿ ಸಹಜವಾಗಿ ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾಗಳಲ್ಲಿ ಇದ್ದಾಗ ಕೋಪ ಬರುತ್ತೆ ಎಂದು ಹೇಳಿದರು.
ಹಿಂದೂ ಏರಿಯಾಗಳಲ್ಲಿ ಮುಸ್ಲಿಂ ನಾಯಕರ ಫೋಟೋ ಹಾಕಿದಾಗ ಕೋಪ ಬರುವುದಿಲ್ಲವೇ? ಅದ್ಧರಿಂದ ಮುಸ್ಲಿಂ ಏರಿಯಾಗಳಲ್ಲಿ ಸಾವರ್ಕರ್ ಫೋಟೋ ಹಾಕಿದಾಗ ಪ್ರಚೋದನಕಾರಿಯಾಗುತ್ತೆ. ಇಂತಹ ಘಟನೆಗಳನ್ನ ತಡೆಗಟ್ಟುವುದನ್ನ ಬಿಟ್ಟು ಅನಗತ್ಯ ವಿಚಾರವನ್ನ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.