ಮನೆ ಯೋಗ ಜಲನೇತಿ ಯೋಗಾಸನದ ಉಪಯೋಗಗಳು

ಜಲನೇತಿ ಯೋಗಾಸನದ ಉಪಯೋಗಗಳು

0

ಜಲನೇತಿ ಯೋಗಾಸನ ಮಾಡುವ ವಿಧಾನ ಅದರಿಂದ ಆಗುವ ಉಪಯೋಗಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಜಲನೇತಿ ಅಲರ್ಜಿ, ತಲೆನೋವಿನಂತಹ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. 

ನೇತಿ ಚಿಕಿತ್ಸೆ ಅಥವಾ ಅಭ್ಯಾಸ ಮೂಗಿನ ಮಾರ್ಗಗಳನ್ನು ಶುದ್ಧೀಕರಿಸುವ ತಂತ್ರವಾಗಿದೆ. ಇದು ದೇಹದಲ್ಲಿ ಕುತ್ತಿಗೆಯ ಮೇಲ್ಭಾಗಕ್ಕೆ ಸಂಬಂಧಿಸಿದ ಶುದ್ಧೀಕರಣ ಪ್ರಕ್ರಿಯೆಯಾಗಿದೆ. ನೇತಿಯನ್ನು ಜಲ ನೇತಿ ಮತ್ತು ಸೂತ್ರ ನೇತಿ ಎಂದು ವರ್ಗೀಕರಿಸಬಹುದು. ನೀರಿನ ಮೂಲಕ ಕುತ್ತಿಗೆಯ ಮೇಲ್ಬಾಗದ ಅಂಗಗಳನ್ನು ಶುದ್ಧಿಕರಿಸಿ, ಆರೋಗ್ಯಯುತವಾಗಿಟ್ಟುಕೊಳ್ಳುವ ವಿಧಾನ ಇದಾಗಿದೆ.

ಮಾಡುವ ವಿಧಾನ

ಜಲನೇತಿಗೆ ಸುಮಾರು ಎರಡು ಲೀಟರ್‌ ನೀರನ್ನು ಚೆನ್ನಾಗಿ ಕುದಿಸಿ ನಂತರ ಉಗುರು ಬೆಚ್ಚಗೆ ಆಗುವಷ್ಟು ತಣಿಸಿಕೊಳ್ಳಿ. ಅದಕ್ಕೆ 2 ರಿಂದ 4 ಚಮಚ ಉಪ್ಪನ್ನು ಸೇರಿಸಿ ಜಲನೇತಿ ಪಾತ್ರೆ ಅಥವಾ ಜಲನೇತಿಗೆ ಬಳಸುವ ಪಾಟ್‌ಗೆ ಹಾಕಿಕೊಳ್ಳಿ.

ನೇರವಾಗಿ ನಿಂತು ಕಾಲುಗಳನ್ನು ಸುಮಾರು ಒಂದು ಅಡಿ ಅಂತರದಲ್ಲಿ ಇರಿಸಿ ಆರಾಮದಲ್ಲಿ ನಿಂತುಕೊಳ್ಳಿ. ನಂತರ ಜಲನೇತಿ ಮಡಕೆಯನ್ನು ಬಲ ಅಂಗೈಯಲ್ಲಿ ಹಿಡಿದು ಸ್ವಲ್ಪ ಮುಂದಕ್ಕೆ ಬಾಗಿ. ತಲೆಯನ್ನು 45 ಡಿಗ್ರಿ ಎಡಭಾಗಕ್ಕೆ ಬಗ್ಗಿಸಿ. ಮಡಕೆಯ ನಳಿಕೆಯನ್ನು ಬಲ ಮೂಗಿನ ಹೊಳ್ಳೆಗೆ ಸೇರಿಸಿ. ಬಾಯಿ ತೆರೆಯಿರಿ ಮತ್ತು ಬಾಯಿಯ ಮೂಲಕ ಮಾತ್ರ ಉಸಿರಾಡಿ. ಎಡ ಹೊಳ್ಳೆಯ ಮೂಲಕ ಲವಣಯುಕ್ತ ನೀರು ಮುಕ್ತವಾಗಿ ಹೊರಬರುವ ರೀತಿ ನಿಂತುಕೊಳ್ಳಿ.

ನಂತರ ಅದನ್ನೇ ವಿರುದ್ಧ ಭಾಗದಲ್ಲಿ ಮಾಡಿ. ಅಂದರೆ ಜಲನೇತಿ ಪಾತ್ರೆಯಲ್ಲಿ ನೀರನ್ನು ತುಂಬಿಸಿ. ಎಡಗೈಯಲ್ಲಿ ಹಿಡಿದುಕೊಳ್ಳಿ ಮತ್ತು ಸ್ವಲ್ಪ ಮುಂದಕ್ಕೆ ಬಾಗಿ. ತಲೆಯನ್ನು ಬಲಭಾಗಕ್ಕೆ 45 ಡಿಗ್ರಿಗಳಷ್ಟು ಬಗ್ಗಿಸಿ. ಮಡಕೆಯ ನಳಿಕೆಯನ್ನು ಎಡ ನಾಸ್ಟೈಲ್‌ಗೆ ಸೇರಿಸಿ. ಬಾಯಿ ತೆರೆಯಿರಿ ಮತ್ತು ಬಾಯಿಯ ಮೂಲಕ ಉಸಿರಾಡಿ. ಲವಣಯುಕ್ತ ನೀರು ಮುಕ್ತವಾಗಿ ಬಲ ನಾಸ್ಟಾಲ್ ಮೂಲಕ ಹೊರಬರುವ ರೀತಿಯಲ್ಲಿ ಮಡಕೆಯನ್ನು ಹೊಂದಿಸಿ. ಪಾತ್ರೆಯಲ್ಲಿನ ಲವಣಯುಕ್ತ ನೀರು ಮುಗಿದ ನಂತರ, ಎಡ ಮೂಗಿನ ಹೊಳ್ಳೆಯಿಂದ ನಳಿಕೆಯನ್ನು ತೆಗೆಯಿರಿ.

ಜಲನೇತಿ ಅಭ್ಯಾಸದ ನಂತರ ಕಪಾಲಭಾತಿಯನ್ನು ಕಟ್ಟುನಿಟ್ಟಾಗಿ 30 ಸೆಕೆಂಡ್ಸ್ ಅಭ್ಯಾಸ ಮಾಡಲೇಬೇಕು. ಇದನ್ನು ಯಾವುದೇ ವಯಸ್ಸಿನವರು ಮಾಡಬಹುದು ಆದರೆ ಸರಿಯಾದ ರೀತಿಯ ತರಬೇತಿಯನ್ನು ಪಡೆದ ಮೇಲೆಯೇ ಅಭ್ಯಾಸ ಮಾಡುವುದು ಒಳ್ಳೆಯದು. ಜಲನೇತಿಯ ಕ್ರಿಯೆಯ ನಂತರ ಮೂಗನ್ನು ಸರಿಯಾಗಿ ಒಣಗುವಂತೆ ನೋಡಿಕೊಳ್ಳಿ.

ಉಪಯೋಗಗಳು:

ಮೂಗಿನ ಮಾರ್ಗವನ್ನು ಸ್ವಚ್ಛಗೊಳಿಸಿ, ಕಟ್ಟಿದ ಮೂಗಿನ ಸಮಸ್ಯೆಯನ್ನು ನಿವಾರಿಸುತ್ತದೆ. ಈ ಮೂಲಕ ಸರಾಗವಾದ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ಕಣ್ಣುಗಳಿಂದ ದೋಷಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೂಗಿನ ಕುಹರದಿಂದ ಹೆಚ್ಚುವರಿ ಕಫ ಶೇಖರಣೆಯಾಗಿದ್ದರೆ ಅದನ್ನು ಹೊರಹಾಕುತ್ತದೆ. ಜಲನೇತಿಯಿಂದ ಧೂಳಿನಿಂದಾಗುವ ಅಲರ್ಜಿಯನ್ನು ನಿಯಂತ್ರಿಸಬಹುದಾಗಿದೆ. ಎಲ್ಲಾ ರೀತಿಯ ತಲೆನೋವನ್ನು ಕಡಿಮೆ ಮಾಡಲ ಜಲನೇತಿ ಅತ್ಯುತ್ತಮ ವಿಧಾನವಾಗಿದೆ. ಆದರೆ ಸರಿಯಾದ ತರಬೇತಿ ಇಲ್ಲದೆ ಅಭ್ಯಾಸ ಮಾಡುವುದು ಒಳ್ಳೆಯದಲ್ಲ.