ಮನೆ ರಾಜ್ಯ ಬೆಳಗಾವಿ: ರಾಜಾರೋಷವಾಗಿ ರಸ್ತೆ ಪಕ್ಕದಲ್ಲಿ ಓಡಾಡಿದ ಚಿರತೆ

ಬೆಳಗಾವಿ: ರಾಜಾರೋಷವಾಗಿ ರಸ್ತೆ ಪಕ್ಕದಲ್ಲಿ ಓಡಾಡಿದ ಚಿರತೆ

0

ಬೆಳಗಾವಿ(Belagavi): ಕಳೆದ 18 ದಿನಗಳಿಂದ‌ ನಾಪತ್ತೆಯಾಗಿದ್ದ ಚಿರತೆ  ಹಿಂಡಲಗಾ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಕಾಣಿಸಿಕೊಂಡಿದೆ.

ಚಿರತೆ ರಾಜಾರೋಷವಾಗಿ ರಸ್ತೆ ಪಕ್ಕದಲ್ಲೇ ಓಡಾಡುತ್ತಿರುವುದನ್ನು ಖಾಸಗಿ ಬಸ್ ಸವಾರರು ಮೊಬೈಲಿನಲ್ಲಿ ವಿಡಿಯೊ ಮಾಡಿದ್ದಾರೆ.

‌ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯಲ್ಲಿನ 22 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ತಿಳಿಸಿದ್ದಾರೆ.

ನಗರದ ಜಾಧವ್ ನಗರದಲ್ಲಿ ಕಳೆದ ಆ.5 ರಂದು ಚಿರತೆ ಪತ್ತೆ ಆಗಿತ್ತು. ಈ ವೇಳೆ ಕಟ್ಟಡ ಕಾರ್ಮಿಕನ ಮೇಲೆ ದಾಳಿ ಮಾಡಿ ಬೆಳಗಾವಿ ಗಾಲ್ಫ್ ಮೈದಾನದಲ್ಲಿ ಹೋಗಿದೆ. ಕಳೆದ 18 ದಿನಗಳಿಂದ ಸೆರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ.

ನಗರ ಪ್ರದೇಶದಲ್ಲಿದ್ದರೂ ಚಿರತೆ ಹಿಡಿಯುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕಾಟಾಚಾರದ ಪತ್ತೆ ಕಾರ್ಯ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.

ಹೀಗಾಗಿ, ಬೆಳಗಾವಿ ಕ್ಯಾಂಪ್, ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಜನರಲ್ಲಿ ಭಯದ ವಾತಾವರಣ ಮನೆ ಮಾಡಿದೆ.