ಮನೆ ರಾಜಕೀಯ ಮಾಂಸ ಆಹಾರ ಸೇವಿಸಿ ದೇಗುಲ ಪ್ರವೇಶ: ಚರ್ಚೆಯಿಂದ ನಾಡಿಗೇನು ಪ್ರಯೋಜನ ಎಂದ ಡಾ.ಯತೀಂದ್ರ

ಮಾಂಸ ಆಹಾರ ಸೇವಿಸಿ ದೇಗುಲ ಪ್ರವೇಶ: ಚರ್ಚೆಯಿಂದ ನಾಡಿಗೇನು ಪ್ರಯೋಜನ ಎಂದ ಡಾ.ಯತೀಂದ್ರ

0

ಚಾಮರಾಜನಗರ(Chamarajanagara): ಮಾಂಸ ಆಹಾರ ತಿಂದು  ದೇಗುಲ ಪ್ರವೇಶದ ಚರ್ಚೆಯಿಂದ ನಾಡಿಗೇನು ಪ್ರಯೋಜನ ಎಂದು ? ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರು ಮಾಂಸದೂಟ ಸೇವಿಸಿ ದೇವಸ್ಥಾನಕ್ಕೆ ಹೋಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ನಡೆಯುತ್ತಿರುವ ಚರ್ಚೆಗೆ ಅವರು ಪ್ರತಿಕ್ರಿಯಿಸಿದರು.

ಆಹಾರ ಸೇವನೆ ಅವರವರ ಇಚ್ಛೆ‌. ದೇವಸ್ಥಾನಕ್ಕೆ ಇಂತಹದ್ದನ್ನೇ ತಿಂದು ಹೋಗಬೇಕು ಎಂದು ಯಾರು ಹೇಳಿದ್ದಾರೆ? ಅಲ್ಲಿಗೆ ಬರುವ ಪ್ರತಿಯೊಬ್ಬರನ್ನೂ ಏನು ತಿಂದಿದ್ದಾರೆ ಎಂದು ಪರಿಶೀಲಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ನಮ್ಮ ತಂದೆಯವರು ದನ ಮತ್ತು ಹಂದಿ ಮಾಂಸ ತಿನ್ನುವುದಿಲ್ಲ. ಹಾಗಿರುವಾಗ ಬೇರೆಯವರನ್ನು ತಿನ್ನಿ ಎನ್ನಲಾಗುತ್ತದೆಯೇ‌? ಪ್ರತಾಪ್ ಸಿಂಹ ಬಂದು ಬಲವಂತವಾಗಿ ತಿನ್ನಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.