ಪಣಜಿ(Panaji): ಬಿಜೆಪಿ ನಾಯಕಿ, ನಟಿ ಸೊನಾಲಿ ಫೋಗಟ್ (42) ಸೋಮವಾರ ರಾತ್ರಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸೊನಾಲಿ ಫೋಗಟ್ ಗೋವಾದಲ್ಲಿ ಸಾವಿಗೀಡಾಗಿರುವ ಸುದ್ದಿಯನ್ನು ಗೋವಾ ಡಿಜಿಪಿ ಜಸ್‌ಪಾಲ್ ಸಿಂಗ್ ಖಚಿತಪಡಿಸಿದ್ದಾರೆ.
ಸೊನಾಲಿ ಅವರು 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರ ಕ್ಷೇತ್ರದಿಂದ ಕುಲ್‌ದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ, ಚುನಾವಣಾ ಕಣದಲ್ಲಿ ಭಾರಿ ಸದ್ದು ಮಾಡಿದ್ದರು.
ಸೋನಾಲಿ ಫೋಗಟ್ ಬಿಗ್ ಬಾಸ್ 14 ರ ಸ್ಪರ್ಧಿಯಾಗಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದರು ಮತ್ತು ಟಿಕ್‌ಟಾಕ್‌ನಲ್ಲಿ ಹೆಚ್ಚಿನ ಫಾಲೋವರ್ಗಳನ್ನು ಹೊಂದಿದ್ದರು.
Saval TV on YouTube