ಮನೆ ರಾಜಕೀಯ ರಾಜ್ಯದ ಹಿತ ಚಿಂತನೆ ಮರೆದ ರಾಷ್ಟ್ರೀಯ ಪಕ್ಷಗಳು: ಜೆಡಿಎಸ್‌ ಆರೋಪ

ರಾಜ್ಯದ ಹಿತ ಚಿಂತನೆ ಮರೆದ ರಾಷ್ಟ್ರೀಯ ಪಕ್ಷಗಳು: ಜೆಡಿಎಸ್‌ ಆರೋಪ

0

ಬೆಂಗಳೂರು(Bengaluru): ಯಾರು ಏನು ತಿನ್ನಬೇಕು,  ಬಿಡಬೇಕು ಅನ್ನೋ ಅನಾವಶ್ಯಕ ಚರ್ಚೆಗಳಲ್ಲಿ ನಿರತವಾಗಿರೋ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯದ ಜನರ ಹಿತ ಚಿಂತನೆಯನ್ನು ಸಂಪೂರ್ಣವಾಗಿ ಮರೆತು ಹೋಗಿರುವಂತಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸಾಕಷ್ಟು ವಾಗ್ವಾಗಳು ನಡೆಯುತ್ತಿರುವ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ಆಕ್ರೋಶ ಹೊರಹಾಕಿದೆ.

ದಿನ ಬೆಳಗಾದರೆ ಎರಡೂ ಸೋಂಬೇರಿ ಪಕ್ಷಗಳ ನಡುವಿನ ಮೊಟ್ಟೆ ಮಾಂಸ ಫೈಟ್ ನೋಡಿ ನಾಡಿನ ಜನ ರೋಸಿ ಹೋಗುತ್ತಿದ್ದಾರೆ. ಇದು ಬಿಜೆಪಿ ಸರ್ಕಾರದ ಮತ್ತೊಂದು ಕುತಂತ್ರವಷ್ಟೇ! ಬೆಲೆ ಏರಿಕೆ, ಹೆಚ್ಚುತ್ತಿರುವ ನಿರುದ್ಯೋಗದಿಂದ ರಾಜ್ಯದಲ್ಲಿ ಎಷ್ಟೋ ಜನರು ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ರಾಜ್ಯದ ಜನರು ಬಿಜೆಪಿಯ ಜನವಿರೋಧಿ ಸರ್ಕಾರವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ವಾಸ್ತವಾಂಶದಿಂದ ಸಾರ್ವಜನಿಕರ ಗಮನ ಸೆಳೆಯುವುದೇ ಬಿಜೆಪಿ ದುರೀಣರ ಗುರಿ ಎಂದು ಕಿಡಿಕಾರಿದೆ.

ಒಂದೆಡೆ ಸಿದ್ದರಾಮಯ್ಯ ನವರ ಕಾರಿಗೆ ಮೊಟ್ಟೆ ಎಸೆದಿದ್ದಕ್ಕೆ ಮಡಿಕೇರಿಯಲ್ಲಿರುವ ಎಸ್‌.ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ನಿರ್ಧರಿಸಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಸರ್ಕಾರ ಅಂದೇ  ಮಡಿಕೇರಿಯಲ್ಲಿ ಸಮಾವೇಶವೊಂದನ್ನು ಮಾಡಲು ಮುಂದಾಗಿದೆ. ಈ ಶಕ್ತಿ ಪ್ರದರ್ಶನದ ದೊಂಬರಾಟದಿಂದ ರಾಜ್ಯದ ಜನರಿಗೆ ಆಗುವ ಉಪಯೋಗವಾದರೂ ಏನು? ಎಂದು ಪ್ರಶ್ನಿಸಿದೆ.

ಇನ್ನೂ ನಾಮಕವಾಸ್ತೆಗೆ ವಿರೋಧ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್ ಪಕ್ಷವು ಇದು ಅರ್ಥವಾಗದಷ್ಟು ಮುಟ್ಟಾಳ ಪಕ್ಷವಾಗಿರಬೇಕು ಅಥವಾ ಅವರ ಉದ್ದೇಶವೂ ಸಹಾ ಇಂಥ ವಿಷಯಗಳ ಚರ್ಚೆಯಿಂದ ಸಮಾಜ ಒಡೆಯುವುದೇ ಆಗಿರಬೇಕು.  ಒಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಜನರ ಸಮಯ, ತೆರಿಗೆ ಹಣ ಎಲ್ಲವನ್ನೂ ವ್ಯರ್ಥ ಮಾಡುತ್ತಿರುವುದಲ್ಲದೆ ತಮ್ಮ ತಮ್ಮ ಸ್ವಾರ್ಥಕ್ಕೆ ಸಮಾಜಕ್ಕೆ ಬೆಂಕಿ ಇಟ್ಟು ತಮಾಷೆ ನೋಡುತ್ತಿವೆ. ಇದೆಲ್ಲವನ್ನು ಸೂಕ್ಷವಾಗಿ ಗಮನಿಸುತ್ತಿರುವ ರಾಜ್ಯದ ಜನರು ಎಚ್ಚೆತ್ತುಕೊಂಡಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಶೀಘ್ರದಲ್ಲೇ ತಕ್ಕ ಪಾಠ ಕಲಿಸುತ್ತಾರೆ ಎಂದು ಟ್ವೀಟ್‌ ಮಾಡಿದೆ.