ಮನೆ ತಂತ್ರಜ್ಞಾನ ಸದ್ಯದಲ್ಲೇ ಇನ್ಸ್ಟಾಗ್ರಾಂ ಪರಿಚಯಿಸಲಿದೇ ‘ಕ್ಯಾಂಡಿಡ್ ಚಾಲೆಂಜಸ್’ ವೈಶಿಷ್ಟ್ಯ!

ಸದ್ಯದಲ್ಲೇ ಇನ್ಸ್ಟಾಗ್ರಾಂ ಪರಿಚಯಿಸಲಿದೇ ‘ಕ್ಯಾಂಡಿಡ್ ಚಾಲೆಂಜಸ್’ ವೈಶಿಷ್ಟ್ಯ!

0

ಇನ್​ಸ್ಟಾಗ್ರಾಂ ತನ್ನ ಬಳಕೆದಾರರಿಗೆ ‘ಡ್ಯುಯಲ್ ಕ್ಯಾಮೆರಾ’ ಆಯ್ಕೆಯನ್ನು ಪರಿಚಯಿಸಿದ ನಂತರ, ಶೀಘ್ರದಲ್ಲೇ ‘ಕ್ಯಾಂಡಿಡ್ ಚಾಲೆಂಜಸ್’ ಎಂಬ ಹೆಸರಿನ ಮತ್ತೊಂದು ವೈಶಿಷ್ಟ್ಯವನ್ನು ಹೊರತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೆಟಾ ಮಾಲಿಕತ್ವದ ಫೇಸ್​ಬುಕ್​ಗೆ ಹೋಲಿಕೆ ಮಾಡಿದರೆ ಇನ್​ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ಹೆಚ್ಚೇ ಇದೆ. ಅದರಲ್ಲೂ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಇನ್​ಸ್ಟಾಗ್ರಾಂ ಹೊಸ ಫೀಚರ್ಸ್ ಅನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಂತೆ ಇದೀಗ ‘ಕ್ಯಾಂಡಿಡ್ ಚಾಲೆಂಜಸ್​’ ಎಂಬ ಹೊಸ ಫೀಚರ್ ಪರಿಚಯಿಸಿಲು ಮುಂದಾಗಿದೆ.

ಇನ್​ಸ್ಟಾಗ್ರಾಂ ತನ್ನ ಬಳಕೆದಾರರಿಗೆ ‘ಡ್ಯುಯಲ್ ಕ್ಯಾಮೆರಾ’ ಆಯ್ಕೆಯನ್ನು ಪರಿಚಯಿಸಿದ ನಂತರ, ಶೀಘ್ರದಲ್ಲೇ ‘ಕ್ಯಾಂಡಿಡ್ ಚಾಲೆಂಜಸ್’ ಎಂಬ ಹೆಸರಿನ ಮತ್ತೊಂದು ವೈಶಿಷ್ಟ್ಯವನ್ನು ಹೊರತರಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೆಸರೇ ಸೂಚಿಸುವಂತೆ, ಬಳಕೆದಾರರು ತಮ್ಮ ಕ್ಯಾಂಡಿಡ್ ಚಿತ್ರಗಳನ್ನು ಫೋಟೋ ಹಂಚಿಕೆ ವೇದಿಕೆಯಲ್ಲಿ ಹಂಚಿಕೊಳ್ಳಬೇಕಾಗುತ್ತದೆ.

ಇನ್​ಸ್ಟಾಗ್ರಾಂ ಬಳಕೆದಾರರು ಈ ಆ್ಯಪ್ ಬಳಸಿಕೊಂಡು ಸೆಲ್ಫಿ ತೆಗೆದುಕೊಳ್ಳಲು ಮತ್ತು ಪೋಸ್ಟ್ ಮಾಡಲು ಪ್ರತಿ ದಿನವೂ ವಿಭಿನ್ನ ಸಮಯದಲ್ಲಿ ಪ್ರಾಂಪ್ಟ್ ಅನ್ನು ಪಡೆಯುತ್ತಾರೆ, ನಂತರ ಅದನ್ನು ಅವರ Instagram ಕಥೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ. ಈ ಹೊಸ ವೈಶಿಷ್ಟ್ಯದ ಬಗ್ಗೆ ಉತ್ಸಾಹವನ್ನು ಹೆಚ್ಚಿಸಲು, ಇನ್​ಸ್ಟಾಗ್ರಾಂ ಬಳಕೆದಾರರಿಗೆ ತಮ್ಮ ಕ್ಯಾಂಡಿಡ್ ಇಮೇಜ್​ಗಳನ್ನು ಅಪ್ಲೋಡ್ ಮಾಡಲು ಕೇವಲ 2 ನಿಮಿಷಗಳನ್ನು ನೀಡುತ್ತದೆ.

ಮಾಹಿತಿಯಂತೆಯೇ, ಈ ನೂತನ ವೈಶಿಷ್ಟ್ಯವು ಜನಪ್ರಿಯ ಅಪ್ಲಿಕೇಶನ್ ‘BeReal’ ನ ನಕಲು ಎಂದು ತೋರುತ್ತದೆ ಎಂದು ಟೆಕ್ ವರದಿಗಾರರು ಹೇಳುತ್ತಾರೆ. ದಿನದ ಯಾವುದೇ ಸಮಯದಲ್ಲಿ ಅಪ್ಲಿಕೇಶನ್ನಿಂದ ಪ್ರಾಂಪ್ಟ್ ಪಡೆದ ನಂತರ 2 ನಿಮಿಷಗಳ ಸಮಯದ ಮಿತಿಯೊಳಗೆ ತಮ್ಮ ಸೆಲ್ಫಿಗಳನ್ನು ಅಪ್ಲೋಡ್ ಮಾಡಲು ಬಳಕೆದಾರರನ್ನು ಕೇಳುವುದರಲ್ಲಿ ಈ ಅಪ್ಲಿಕೇಶನ್​ನ ಮೂಲತತ್ವವಿದೆ.

ಟೆಕ್ ಸಂಶೋಧಕರಾದ ಅಲೆಸ್ಸಾಂಡ್ರೊ ಪಲುಝಿ ಅವರು ಇನ್​ಸ್ಟಾಗ್ರಾಂ ಅಪ್ಲಿಕೇಶನ್​ನ ಈ ಹೊಸ ಬೀಟಾ ವೈಶಿಷ್ಟ್ಯದ ಬಗ್ಗೆ ಚಿತ್ರಣವನ್ನು ನೀಡಿದ್ದಾರೆ ಮತ್ತು ವೈಶಿಷ್ಟ್ಯವು ಕೇವಲ ಒಂದು ಮೂಲಮಾದರಿಯಾಗಿರಬಹುದು ಎಂದು ಹೇಳಿದ್ದಾರೆ.

ಅಂದಹಾಗೆಯೇ ಇನ್​ಸ್ಟಾಗ್ರಾಂ ಕ್ಯಾಂಡಿಡ್ ಚ್ಯಾಲೆಂಜಸ್, BeReal ಅಪ್ಲಿಕೇಶನ್​ನಿಂದ ಪ್ರೇರಿತವಾಗಿದೆ. ಇದನ್ನು ಬಳಕೆದಾರರಿಗೆ ಹೊಸ ಅನುಭವ ನೀಡಲಿದೆ.

ಕ್ಯಾಂಡಿಟ್ ಚ್ಯಾಲೆಂಜಸ್ ಪ್ರತಿದಿನ ಬೇರೆ ಬೇರೆ ಸಮಯದಲ್ಲಿ, 2 ನಿಮಿಷಗಳಲ್ಲಿ ಫೋಟೋವನ್ನು ಸೆರೆಹಿಡಿಯಲು ಮತ್ತು ಹಂಚಿಕೊಳ್ಳಲು ಅಧಿಸೂಚನೆಯನ್ನು ಸಿಗಲಿದೆ” ಎಂದು ಪಲುಝಿ ಟ್ವೀಟ್ ಮಾಡಿದ್ದಾರೆ.