ಮನೆ ಸುದ್ದಿ ಜಾಲ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನೆ ಅಭಿಯಾನ ಪೂರ್ವಭಾವಿ ಸಭೆ

ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನೆ ಅಭಿಯಾನ ಪೂರ್ವಭಾವಿ ಸಭೆ

0

ಮೈಸೂರು (Mysuru): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮ ಕುಷ್ಟರೋಗ ಪತ್ತೆ ಹಚ್ಚುವ ಅಭಿಯಾನ 2022-23 ರ ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಸಲಾಯಿತು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳಾದ ಡಾ.ಮಂಜುಪ್ರಸಾದ್ ಅವರು ಮಾತನಾಡಿ, ಕಾರ್ಯಕ್ರಮದಲ್ಲಿ ಕುಷ್ಟರೋಗ ನಿರ್ಮೂಲನೆಗಾಗಿ ಆರಂಭಿಕ ಹಂತದಲ್ಲಿ ರೋಗ ಪತ್ತೆ ಹಚ್ಚುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ದಿನಾಂಕ 2022ರ ಸೆಪ್ಟೆಂಬರ್ 12 ರಿಂದ 2022ರ ಸೆಪ್ಟೆಂಬರ್ 29ರ ವರೆಗೆ ಎಲ್‌ ಸಿಡಿಸಿ ಕಾರ್ಯಕ್ರಮವನ್ನು ಜಿಲ್ಲಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪತ್ತೆ ಹಚ್ಚದೆ ಉಳಿದ ಪ್ರಕರಣಗಳನ್ನು ಏಕಕಾಲದಲ್ಲಿ ಶೀಘ್ರಗತಿಯಲ್ಲಿ ಪತ್ತೆ ಹಚ್ಚುವ ಹಾಗೂ ಸಮುದಾಯದಲ್ಲಿ ರೋಗ ಸಂವಹನ ತಡೆಗಟ್ಟುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.

ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಎಲ್ಲಾ ಹಂತಗಳ ಅಂದರೆ ಮಹಾನಗರ ಪಾಲಿಕೆ ನಗರ ಸಭೆ, ಪುರಸಭೆ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಲೇವಾರಿ ವಾಹನಗಳ ಮೂಲಕ ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಚರ್ಚಿಸಲಾಯಿತು. ಹಾಗೂ ಸರ್ಕಾರಿ ಖಾಸಗಿ ಕಚೇರಿಗಳು, ಶಾಲೆ-ಕಾಲೇಜುಗಳು, ಹಾಸ್ಟೆಲ್‌ಗಳು, ಆಸ್ಪತ್ರೆಗಳು, ವಾಣಿಜ್ಯ ಕಟ್ಟಡಗಳಲ್ಲಿ ಕುಷ್ಟರೋಗ ಪ್ರಕರಣ ಪತ್ತೆ ಆಂದೋಲನ ಸಮಯದಲ್ಲಿ ಸಹಕಾರ ನೀಡುವಂತೆ ಚರ್ಚಿಸಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಆಂದೋಲನದ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತರು ಕಡ್ಡಾಯವಾಗಿ ತಪಾಸಣಾ ತಂಡದಲ್ಲಿ ಸಮೀಕ್ಷ ಕಾರ್ಯದಲ್ಲಿ ಭಾಗವಹಿಸಬೇಕು. ತಾಲೂಕುಗಳಿಗೆ ತಪ್ಪದೇ ಪ್ರತಿದಿನ ಎರಡು ಆರೋಗ್ಯ ಕೇಂದ್ರಗಳ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿಯನ್ನು ನೀಡಲಾಗುವುದು. ಲೆಪ್ರಸಿ ಕೇಸ್ ಡಿಟೆಕ್ಷನ್ ಕ್ಯಾಂಪಿಂಗ್ ಎಲ್ ಸಿಡಿಸಿ ಬಗ್ಗೆ ದೇವಾಲಯಗಳಲ್ಲಿ ಮಸೀದಿಗಳಲ್ಲಿ ಮತ್ತು ಚರ್ಚ್ ಗಳಲ್ಲಿ ಧ್ವನಿ ವರ್ಧಕಗಳ ಮೂಲಕ ಪ್ರಚಾರಪಡಿಸಬೇಕೆಂದು ತಿಳಿಸಿದರು.

ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಆಡಳಿತ ವೈದ್ಯಾಧಿಕಾರಿಗಳು ಎಲ್‌ಸಿಬಿಸಿ ಕಾರ್ಯಕ್ರಮದ ಬಗ್ಗೆ ತಾಲೂಕು ದಂಡಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕು ಅಂತರ ಇಲಾಖೆ ಸಮನ್ವಯ ಸಭೆಯಲ್ಲಿ ಸಹಕರಿಸಿ ಆಶಾ ಮತ್ತು ಸ್ವಯಂಸೇವಕರಿಗೆ ತರಬೇತಿ ಹಾಗು ತಾಲೂಕಿಗೆ ಸಂಬಂಧಪಟ್ಟ ಎಲ್ಲ ವಲಸೆ ನಗರ ಪ್ರದೇಶ ಹಾಗು ಸೂಕ್ಷ್ಮ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಲಾಗುವುದು ಕಾರ್ಯಕರ್ತರು ಕಾರ್ಯಕ್ರಮಕ್ಕೆ ನಿಯೋಜಿಸಿ ಸಮೀಕ್ಷೆಯಲ್ಲಿ ಎಲ್ಲಾ ನಿವಾಸಿಗಳು ಒಳಪಡುವಂತೆ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸುವಂತೆ ಸಹಕರಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯಾದ ಡಾ. ಬಗಾದಿ ಗೌತಮ್, ಆರೋಗ್ಯ ಇಲಾಖೆ ಎಲ್ಲಾ ತಾಲೂಕಿನ ತಾಲೂಕು ಅಧಿಕಾರಿಗಳು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ಡಿ.ಎನ್.ಟಿ ತಂಡದ ಮೇಲ್ವಿಚಾರಕರು ಉಪಸ್ಥಿತರಿದ್ದರು.