ಮನೆ ರಾಜ್ಯ ಬಾಗಲಕೋಟೆಯ ಆನದಿನ್ನಿ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ

ಬಾಗಲಕೋಟೆಯ ಆನದಿನ್ನಿ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ

0

ಬೆಂಗಳೂರು(Bengaluru): ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಾನದಿನ್ನಿ ಏತ ನೀರಾವರಿ ಯೋಜನೆಯ 2ನೇ ಹಂತದ ಕಾಮಗಾರಿಯ ರೂ.28.00 ಕೋಟಿ ಮೊತ್ತದ ಅಂದಾಜಿಗೆ ಇಂದು ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ತನ್ನ ಅನುಮೋದನೆ ನೀಡಿದೆ.

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಆನದಿನ್ನಿ ಗ್ರಾಮದ ಹತ್ತಿರ ಆನದಿನ್ನಿ ಏತ ನೀರಾವರಿ ಯೋಜನೆಯ 1ನೇ ಹಂತದ ಕಾಮಗಾರಿಯನ್ನು ಕೈಗೊಂಡು ಆನದಿನ್ನಿ, ಬನ್ನಿದಿನ್ನಿ, ಕೇಸನೂರ, ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಆನದಿನ್ನಿ ಯೋಜನೆಯ 2ನೇ ಹಂತದ ಕಾಮಗಾರಿಯನ್ನು ಕೈಗೊಂಡು ಆನದಿನ್ನಿ, ಕೇಸನೂರ, ಗದ್ದನಕೇರಿ ಹಾಗೂ ಮುರನಾಳ ಗ್ರಾಮಗಳ ನೀರಾವರಿ ವಂಚಿತ 840 ಹೆಕ್ಟೇರ್ ಪ್ರದೇಶಕ್ಕೆ ಆನದಿನ್ನಿ ಹತ್ತಿರ ಘಟಪ್ರಭಾ ನದಿಯಿಂದ 1096 ಕ್ಯೂಮೆಕ್ಸ್ ನೀರನ್ನೆತ್ತಿ ರೈಸಿಂಗ್ ಮೇನ್ ಮುಖಾಂತರ ಸದರಿ ಗ್ರಾಮಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ.

ಆನದಿನ್ನಿ ಏತ ನೀರಾವರಿ 2ನೇ ಹಂತದ ಕಾಮಗಾರಿ ನಿರ್ಮಿಸುವುದರಿಂದ ಈ ಭಾಗದ ಗ್ರಾಮಗಳ ನೀರಾವರಿ ವಂಚಿತ ಕೃಷಿ ಪ್ರದೇಶಗಳಿಗೆ ನೀರು ಒದಗಿಸುವುದಲ್ಲದೇ ಇದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.