ಮನೆ ತಂತ್ರಜ್ಞಾನ ಸಾಕ್ಷಿ ಕೇಳುವ ಮೊದಲು ನಿಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಿ: ಬಿಜೆಪಿ ವಿರುದ್ಧ ಹೆಚ್.ಡಿಕೆ ಆಕ್ರೋಶ

ಸಾಕ್ಷಿ ಕೇಳುವ ಮೊದಲು ನಿಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಿ: ಬಿಜೆಪಿ ವಿರುದ್ಧ ಹೆಚ್.ಡಿಕೆ ಆಕ್ರೋಶ

0

ಮೈಸೂರು(Mysuru):  ಎಲ್ಲದಕ್ಕೂ ಸಾಕ್ಷಿ ಕೇಳುತ್ತೀರಿ.  ಮೊದಲು ನಿಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ  ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ ಶೇ.40 ರಷ್ಟು ಕಮಿಷನ್ ವಿಚಾರವಾಗಿ ಬಿಜೆಪಿ ನಾಯಕರು ಸಾಕ್ಷಿ ನೀಡಿ ಎಂಬ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು

ಬಿಜೆಪಿ ಸರ್ಕಾರದಿಂದಲೇ ಕಮಿಷನ್ ಶುರುವಾಗಿದ್ದು, ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿರುವುದು ಸತ್ಯ. 2008ರಲ್ಲಿ ಬಿಜೆಪಿ ಸರ್ಕಾರದಿಂದಲೇ ಕಮಿಷನ್ ಶುರುವಾಯಿತು. ಅಪರೇಷನ್ ಕಮಲದಿಂದ ಈ ವಾತಾವರಣ ಸೃಷ್ಠಿಯಾಗಿದೆ. ಎಲ್ಲಾ ಪಕ್ಷಗಳ ಶಾಸಕರು ಗಣಿಗಾರಿಕೆಗೆ ಲೈಸೆನ್ಸ್ ಪಡೆದಿದ್ದಾರೆ.  ಮರಳು ದಂಧೆ ಆರಂಭವಾಗಿದ್ದ ಬಿಜೆಪಿ ಸರ್ಕಾರದಿಂದ ಎಂದು ದೂರಿದರು.

ಗುತ್ತಿಗೆ ದಾರರಿಂದ ಕಮಿಷನ್ ಪಡೆಯುವುದು ಶೇ 3 ಮತ್ತು 4ರಷ್ಟಿದೆ. ಹಿಂಸೆ ಮಾಡಿ ಬಲವಂತವಾಗಿ ಕಮಿಷನ್ ಪಡೆಯಲಾಗುತ್ತಿದೆ.   ಉಪನೋಂದಣಿ ಕಚೇರಿಯಲ್ಲಿ ಚಂದಾ ಎತ್ತುವುದೂ ಇದೆ. ಇದು ವ್ಯವಸ್ಥೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ನನ್ನ ಅವಧಿಯಲ್ಲೂ ಕೆಲವರು ಹಣ ಪಡೆದಿದ್ದಾರೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು..? ಇದನ್ನೆಲ್ಲಾ ಸರಿ ಮಾಡೋದು ಯಾರು ? ಎಂದು ಪ್ರಶ್ನಿಸಿದರು.

ಸರ್ಕಾರದ ಬಗ್ಗೆ ಕೆಟ್ಟ ಜನಾಭಿಪ್ರಾಯ ಇದೆ. ಪರ್ಸೆಂಟೇಜ್  ಸಂಸ್ಕೃತಿ  ಜನರಿಗೆ ಗೊತ್ತಿದೆ. ಸರ್ಕಾರದ ಆಡಳಿತ ಯಂತ್ರ ದುರ್ಬಳಕೆಯಾಗುತ್ತಿದೆ ಎಂದರು.