ಚಾಮರಾಜನಗರ(Chamarajanagar): ಸೋಮವಾರ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ತಾಲ್ಲೂಕಿನ ಕಿರಗಸೂರು ಗ್ರಾಮದ ಹತ್ತು ಮನೆಗಳಿಗೆ ನೀರು ನುಗ್ಗಿದೆ.
ಬಸಪ್ಪ ಎಂಬುವವರ ಅಂಗಡಿ ಜಲಾವೃತಗೊಂಡಿದೆ.
ತುಂಬಿ ಹರಿಯುತ್ತಿದ್ದ ಅಡ್ಡ ಹಳ್ಳದ ನೀರು ಗ್ರಾಮಕ್ಕೆ ನುಗ್ಗಿದ್ದು ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯುತ್ತಿದೆ.
ಹೊಲಘಟ್ಟ ಕೆರೆಯು ತುಂಬಿ ನೀರು ಮಾದಾಪುರ -ಕಿರಗಸೂರು ಸಂಪರ್ಕಿಸುವ ರಸ್ತೆಯಲ್ಲಿ ಹರಿಯುತ್ತಿದೆ. ಮಳೆ ಮುಂದುವರಿದರೆ ಸಂಪರ್ಕ ತಪ್ಪುವ ಭೀತಿ ಎದುರಾಗಿದೆ.














