ಮನೆ ದಾಂಪತ್ಯ ಸುಧಾರಣೆ ನಿಮ್ಮ ಪತ್ನಿಯಲ್ಲಿ ಈ 3 ಗುಣಗಳಿದ್ದರೆ ನಿಮ್ಮಷ್ಟು ಅದೃಷ್ಟವಂತರಿಲ್ಲ

ನಿಮ್ಮ ಪತ್ನಿಯಲ್ಲಿ ಈ 3 ಗುಣಗಳಿದ್ದರೆ ನಿಮ್ಮಷ್ಟು ಅದೃಷ್ಟವಂತರಿಲ್ಲ

0

ಆಚಾರ್ಯ ಚಾಣಕ್ಯನ ನೀತಿಗಳು ನಮಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಜೀವನದಲ್ಲಿ ನಿಜವಾದ ಸಂಗಾತಿಯನ್ನು ಪರೀಕ್ಷಿಸಲು ಚಾಣಕ್ಯ ನೀತಿಯು ಉತ್ತಮ ಮಾರ್ಗವಾಗಿದೆ. ಅದು ನಿಮ್ಮ ಸ್ವಂತ ಸ್ನೇಹಿತರಾಗಿರಲಿ, ಸಂಗಾತಿಯಾಗಿರಲಿ ಅಥವಾ ಸಂಬಂಧಿಕರಾಗಿರಲಿ ಅವರ ಬಗ್ಗೆ ತಿಳಿದುಕೊಳ್ಳಲು ನಿಮ್ಮನ್ನು ಪ್ರೇರೇಪಿಸುತ್ತದೆ.

ಒಳ್ಳೆಯ ಜೀವನ ಸಂಗಾತಿ ಸಿಕ್ಕರೆ ಬದುಕು ಹಸನಾಗುತ್ತದೆ ಎಂಬ ಮಾತಿದೆ. ಚಾಣಕ್ಯನು ನೀತಿಶಾಸ್ತ್ರದಲ್ಲಿ ಮಹಿಳೆಯರ ಮೂರು ಗುಣಗಳನ್ನು ಉಲ್ಲೇಖಿಸಿದ್ದಾನೆ ಅದು ಅವರನ್ನು ಶ್ರೇಷ್ಠರನ್ನಾಗಿ ಮಾಡುತ್ತದೆ. ಅಂತಹ ಗುಣಗಳಿರುವ ಮಹಿಳೆಯನ್ನು ಸಂಗಾತಿಯಾಗಿ ಪಡೆದ ವ್ಯಕ್ತಿಯ ಅದೃಷ್ಟ ಹೊಳೆಯಲು ಪ್ರಾರಂಭಿಸುತ್ತದೆ. ಈ ಗುಣಗಳಿರುವ ಮಹಿಳೆಯರು ಕೇವಲ ತಮ್ಮ ಪತಿಯ ಸಂತೋಷಕ್ಕೆ ಮಾತ್ರವಲ್ಲ, ಸಂಪೂರ್ಣ ಕುಟುಂಬದ ಸಂತೋಷಕ್ಕೆ ಹೆಚ್ಚು ಒತ್ತನ್ನು ನೀಡುತ್ತಾರೆ. ಮಹಿಳೆಯರಲ್ಲಿರಬೇಕಾದ ಆ ಗುಣಗಳಾವುವು ಗೊತ್ತೇ..?
1. ತೃಪ್ತರಾಗುವ ಸ್ವಭಾವ:
ಆಸೆಗಳನ್ನು ಕೊಲ್ಲುವುದು ಒಳ್ಳೆಯದಲ್ಲ, ಆದರೆ ಮದುವೆಯ ನಂತರ ತನ್ನ ಕುಟುಂಬದ ಆರ್ಥಿಕ ಮತ್ತು ಕೌಟುಂಬಿಕ ಪರಿಸ್ಥಿತಿಗೆ ಹೊಂದಿಕೊಂಡು ಕುಟುಂಬದಲ್ಲಿ ಸಮತೋಲನವನ್ನು ಕಾಯ್ದುಕೊಂಡು ತನ್ನ ಇಷ್ಟಾರ್ಥಗಳನ್ನು ಪೂರೈಸುವ ಮಹಿಳೆ ತನ್ನ ಪತಿ ಮತ್ತು ತನ್ನ ಪತಿಯ ಮನೆಯವರಿಗೆ ಅದೃಷ್ಟವಂತರಾಗಿರುತ್ತಾರೆ. ಸಂತೃಪ್ತಿಯ ಭಾವನೆಯನ್ನು ಹೊಂದಿರುವ ಮಹಿಳೆಯರು, ಮತ್ತು ಅವರದಾಂಪತ್ಯ ಜೀವನವು ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ. ಇಂತಹ ಮಹಿಳೆಯನ್ನು ತನ್ನ ಪತ್ನಿಯಾಗಿ ಪಡೆದ ಪುರುಷರು ತುಂಬಾ ಅದೃಷ್ಟವಂತರಾಗಿರುತ್ತಾರೆ. ಅವರ ಹೆಂಡತಿಯರು ಹಣವನ್ನು ಉಳಿಸುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಇದರಿಂದ ಅವರ ಜೀವನವು ಉತ್ತಮ ಮಾರ್ಗದಲ್ಲಿ ಸಾಗುತ್ತದೆ ಎಂದು ಚಾಣಕ್ಯ ತನ್ನ ನೀತಿಯಲ್ಲಿ ಹೇಳಿದ್ದಾನೆ.
2. ವಿದ್ಯಾವಂತ ಮಹಿಳೆ:
ಸದ್ಗುಣಶೀಲ ಹೆಂಡತಿ ಇಡೀ ಕುಟುಂಬವನ್ನು ನೋಡಿಕೊಳ್ಳಬಹುದು. ವಿದ್ಯಾವಂತ ಮಹಿಳೆ ಆತ್ಮವಿಶ್ವಾಸದಿಂದ ಕೂಡಿರುತ್ತಾಳೆ. ಅಂತಹ ಮಹಿಳೆಯರಿಗೆ ಸರಿ ಮತ್ತು ತಪ್ಪುಗಳನ್ನು ಹೇಗೆ ಗುರುತಿಸುವುದು ಎಂಬುದು ಚೆನ್ನಾಗಿ ತಿಳಿದಿರುತ್ತದೆ. ವಿದ್ಯಾವಂತ ಮಹಿಳೆಯು ತನ್ನ ಪತಿಯ ಕಷ್ಟಕಾಲದಲ್ಲಿ ಪತಿಯೊಂದಿಗೆ ತನ್ನ ಕುಟುಂಬದ ಆಸರೆಯಾಗುತ್ತಾಳೆ. ಶಿಕ್ಷಣದ ಜೊತೆಗೆ ಮುಂದಿನ ಪೀಳಿಗೆಯ ಭವಿಷ್ಯವನ್ನು ಸುಧಾರಿಸುವಲ್ಲಿ ಸುಸಂಸ್ಕೃತ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ಮಹಿಳೆಯನ್ನು ವಿವಾಹವಾದ ವ್ಯಕ್ತಿಯ ಜೀವನವು ಸುಖದಿಂದ ಕೂಡಿರುತ್ತದೆ ಎಂದು ಚಾಣಕ್ಯ ಹೇಳುತ್ತಾನೆ.
3.
ಧರ್ಮದ ಮಹತ್ವವನ್ನು ಹೊಂದಿರುವ ಮಹಿಳೆ:

ಧರ್ಮವನ್ನು ಅನುಸರಿಸುವ ಮಹಿಳೆ ತನ್ನ ಕರ್ತವ್ಯಗಳಿಂದ ಎಂದಿಗೂ ವಿಮುಖಳಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯನು ಹೇಳುತ್ತಾನೆ. ಅಧ್ಯಾತ್ಮದಲ್ಲಿ ನಂಬಿಕೆಯಿಟ್ಟಿರುವ ಮಹಿಳೆಯರ ಮನೆಯಲ್ಲಿ ನೆಮ್ಮದಿ, ಸಂತೋಷ ಸದಾಕಾಲ ಇರುತ್ತದೆ. ಧರ್ಮವನ್ನು ಅನುಸರಿಸುವ ಮಹಿಳೆಯರು ತಮ್ಮೊಂದಿಗೆ ಕುಟುಂಬದ ಜೀವನವನ್ನು ಸಾರ್ಥಕಗೊಳಿಸುತ್ತಾರೆ. ಈ ಕಾರಣದಿಂದಾಗಿ, ಮುಂಬರುವ ಪೀಳಿಗೆಗಳು ಧಾರ್ಮಿಕ ಮತ್ತು ಸುಸಂಸ್ಕೃತರಾಗಿ ಹೊರಹೊಮ್ಮುತ್ತಾರೆ. ಧರ್ಮದ ಮಹತ್ವವನ್ನು ತಿಳಿದಿರುವ ಮಹಿಳೆಯು ದೇವರ ಆಶೀರ್ವಾದವನ್ನು ಪಡೆದಿರುತ್ತಾಳೆ.
ಆಚಾರ್ಯ ಚಾಣಕ್ಯನು ಹೇಳುವ ಪ್ರಕಾರ ಈ ಮೇಲಿನ ಗುಣವಿರುವ ಅಥವಾ ಸ್ವಭಾವವುಳ್ಳ ಮಹಿಳೆಯರನ್ನು ವಿವಾಹವಾದ ಪುರುಷನ ಜೀವನವು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಈ ಮೇಲಿನ ಗುಣವಿರುವ ಮಹಿಳೆಯರು ಪತಿಗೆ ಅದೃಷ್ಟದ ಪತ್ನಿಯರಾಗಿರುತ್ತಾರೆ. ಮತ್ತು ಯಾವಾಗಲೂ ಪತಿಗೆ ಸಹಕಾರವನ್ನು ನೀಡಿಕೊಂಡು ಇರುತ್ತಾರೆ.