ಮನೆ ಆರೋಗ್ಯ ರಾತ್ರಿ ಊಟ ಆದಮೇಲೆ ವಾಕ್ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ

ರಾತ್ರಿ ಊಟ ಆದಮೇಲೆ ವಾಕ್ ಮಾಡುವುದರಿಂದ ಸಾಕಷ್ಟು ಪ್ರಯೋಜನವಿದೆ

0

ನಾವೆಲ್ಲರೂ ಒಂದು ರೀತಿಯ ಸೋಮಾರಿಗಳು. ನಮಗಿಂತ ನಮ್ಮ ಹಿರಿಯರು ತುಂಬಾ ಆರೋಗ್ಯವಂತರಾಗಿರುತ್ತಾರೆ. ಏಕೆಂದರೆ ಅವರಿಗೆ ರಾತ್ರಿ ಹೊತ್ತು ಊಟ ಆದ ಮೇಲೆ ಎಲೆ ಅಡಿಕೆ ಹಾಕಿಕೊಂಡು ಓಡಾಡುವ ಅಭ್ಯಾಸವಿರುತ್ತದೆ. ಹಾಗಾಗಿ ಅವರಿಗೆ ನೆಮ್ಮದಿಯ ನಿದ್ರೆ ಕೂಡ ಬರುತ್ತದೆ. ನಾವುಗಳು ಊಟ ಆದ ತಕ್ಷಣ ಹಾಸಿಗೆ ಎಲ್ಲಿದೆಯೆಂದು ಹುಡುಕಾಡುತ್ತೇವೆ.

ಅಂದರೆ ನಮಗೆ ವಾಕಿಂಗ್ ಮಾಡಬೇಕು ಎನ್ನುವುದು ಮನಸ್ಸಿಗೆ ಬರುವುದಿಲ್ಲ. ಆದರೆ ನಿಜ ಹೇಳಬೇಕು ಎಂದರೆ, ಊಟ ಆದ ಮೇಲೆ ಕನಿಷ್ಠ ಹತ್ತು ನಿಮಿಷ ವಾಕಿಂಗ್ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳು ಸಿಗುತ್ತದೆ. ಇದನ್ನು ಆರೋಗ್ಯ ತಜ್ಞರ ಬಾಯಲ್ಲೇ ಕೇಳಿ.

ಶುಗರ್ ಕಂಟ್ರೋಲ್ ನಲ್ಲಿ ಇರುತ್ತದೆ

•           ಪ್ರತಿಷ್ಠಿತ ಅಮೇರಿಕಾ ಡಯಾಬಿಟಿಸ್ ಅಸೋಸಿಯೇಷನ್ ಪ್ರಕಾರ ಊಟ ಆದ ನಂತರದಲ್ಲಿ ಹತ್ತು ನಿಮಿಷ ವಾಕಿಂಗ್ ಮಾಡುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿ ಉಳಿಯುತ್ತದೆ.

•           ಹೀಗಾಗಿ ರಕ್ತದಲ್ಲಿ ಒಳ್ಳೆಯ ಪ್ರಮಾಣದಲ್ಲಿ ಸಕ್ಕರೆ ಮತ್ತು ಗ್ಲೂಕೋಸ್ ನಿರ್ವಹಣೆ ಮಾಡಿಕೊಳ್ಳಲು ಮತ್ತು ಮಾಂಸಖಂಡಗಳಿಗೆ ರಕ್ತದಿಂದ ಹೆಚ್ಚುವರಿ ಗ್ಲುಕೋಸ್ ಪಡೆದುಕೊಳ್ಳಲು ಅನುಕೂಲ ವಾಗುತ್ತದೆ.

ಜೀರ್ಣ ಶಕ್ತಿ ಹೆಚ್ಚಾಗುತ್ತದೆ

•           ರಾತ್ರಿ ಊಟ ಆದ ಮೇಲೆ ಸ್ವಲ್ಪ ಹೊತ್ತು ವಾಕಿಂಗ್ ಮಾಡುವುದರಿಂದ ನೀವು ಸೇವನೆ ಮಾಡಿದ ಆಹಾರವನ್ನು ಜೀರ್ಣ ಮಾಡಲು ಅಗತ್ಯವಾಗಿ ಬೇಕಾದ ಜೀರ್ಣರಸಗಳು ಉತ್ಪತ್ತಿ ಆಗುತ್ತವೆ.

•           ಇದು ಕ್ರಮೇಣವಾಗಿ ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಜೊತೆಗೆ ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ದೈಹಿಕ ಆಯಾಸ ಎಲ್ಲವೂ ಮಾಯವಾಗುತ್ತದೆ.

ಮೆಟಬಾಲಿಸಂ ಹೆಚ್ಚಾಗುತ್ತದೆ

•           ಹೌದು ಊಟ ಆದ ಮೇಲೆ 10 ನಿಮಿಷ ಕಾಲ ವಾಕಿಂಗ್ ಮಾಡುವುದರಿಂದ, ದೇಹದಲ್ಲಿ ಮೆಟಬಾಲಿಸಮ್ ವೃದ್ಧಿಸುತ್ತದೆ. ನಿಮ್ಮ ದೇಹದಿಂದ ಹೆಚ್ಚುವರಿ ಕ್ಯಾಲೋರಿಗಳು ಕರಗುತ್ತವೆ.

•           ಇದರಿಂದ ನಿಮ್ಮ ದೇಹ ಫಿಟ್ ಅಂಡ್ ಫೈನ್ ಆಗಿರುತ್ತದೆ. ನೀವು ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹ ಇದು ಸಹಕಾರಿ.

ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

ವಾಕಿಂಗ್ ಮಾಡುವುದರಿಂದ ನಿಮ್ಮ ಮೆದುಳಿನಲ್ಲಿ ಸಂತೋಷಕರ ಹಾರ್ಮೋನ್ ಎನ್ನಲಾದ ಎಂಡೋರ್ಫಿನ್ ಬಿಡುಗಡೆಯಾಗುತ್ತದೆ, ಇದು ನಿಮ್ಮ ಮಾನಸಿಕ ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ಆರಾಮದಾಯಕ ಅನುಭವ ನೀಡುತ್ತದೆ. ಮಾನಸಿಕ ಒತ್ತಡ ಮತ್ತು ಮಾನಸಿಕ ಖಿನ್ನತೆ ದೂರವಾಗುತ್ತವೆ.

ನೆಮ್ಮದಿಯಾಗಿ ಮಲಗಿ ನಿದ್ರಿಸಬಹುದು

ನಿಮಗೆ ನಿದ್ರೆಹೀನತೆ ಸಮಸ್ಯೆ ಇದೆಯಾ? ಹಾಗಾದ್ರೆ ಮೊದಲು ರಾತ್ರಿ ಹೊತ್ತು ಊಟ ಮಾಡಿ ವಾಕಿಂಗ್ ಮಾಡುವ ಅಭ್ಯಾಸವನ್ನು ಇಂದಿನಿಂದಲೇ ಪ್ರಾರಂಭ ಮಾಡಿ. ನಿಮಗೆ ಒಳ್ಳೆಯ ಫಲಿತಾಂಶ ಬಹಳ ಬೇಗನೆ ಸಿಗುತ್ತದೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ನಿಮಗೆ ಒಳ್ಳೆಯ ವಿಶ್ರಾಂತಿ ಸಿಕ್ಕಂತೆ ಅನುಭವ ಆಗುತ್ತದೆ.