ಮನೆ ಅಪರಾಧ ನೇಗಿನಹಾಳ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿ ನಿಧನ

ನೇಗಿನಹಾಳ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿ ನಿಧನ

0

ಬೈಲಹೊಂಗಲ(Byilahongala): ತಾಲ್ಲೂಕಿನ ನೇಗಿನಹಾಳದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ (50) ಸಾವನ್ನಪ್ಪಿದ್ದು, ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರ ಶವ ಸೋಮವಾರ ಪತ್ತೆಯಾಗಿದೆ.

ಮಠದ ಆವರಣದಲ್ಲಿರುವ ಅವರ ಮಲಗುವ ಕೋಣೆಯಲ್ಲಿಯೇ ಶ್ರೀಗಳು ನೇಣು ಹಾಕಿಕೊಂಡಿದ್ದಾರೆ. ಎಂದಿನಂತೆ ಸೋಮವಾರ ಬೆಳಿಗ್ಗೆ ಅವರ ಸೇವಕ ಶ್ರೀಗಳನ್ನು ನಿದ್ದೆಯಿಂದ ಎಬ್ಬಿಸಲು ಹೋದಾಗ ಘಟನೆ ಬೆಳಕಿಗೆ ಬಂದಿದೆ.

ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡರೂ ಪೂರ್ಣ ತನಿಖೆಯ ನಂತರ ಸಾವಿನ ರೀತಿ ಗೊತ್ತಾಗಲಿದೆ. ಸಾವಿಗೆ ನಿಖರ ಕಾರಣ ಏನು ಎಂಬುದು ಸದ್ಯ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

2007ರಲ್ಲಿ ಅವರು ಗುರು ಮಡಿವಾಳೇಶ್ವರ ಪೀಠವನ್ನು ಅಲಂಕರಿಸಿದ್ದರು. ಅವರ ಸೇವಕರು ಹಾಗೂ ಕೆಲವು ಶಿಷ್ಯರು ಕೂಡ ಮಠದಲ್ಲೇ ಇರುತ್ತಾರೆ. ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಳ್ಳುವಂಥ ಸಮಸ್ಯೆ ಏನಿತ್ತು ಎಂಬುದು ನಮಗೂ ಅಂದಾಜಿಸಲು ಆಗುತ್ತಿಲ್ಲ. ಪ್ರತಿ ದಿನ ಮಠದಲ್ಲಿ ಶ್ರಾವಣದ ಭಜನೆ ಮಾಡಿದ್ದೇವು. ಶ್ರೀಗಳ ಮಕ್ಕಳಂತೆ ಅವರನ್ನು ಗೌರವದಿಂದ ಕಾಣುತ್ತಿದ್ದೇವು. ಈ ವಿಷಯ ಭಕ್ತರನ್ನು ದಿಗಿಲುಗೊಳಿಸಿದೆ ಎಂದು ಶ್ರೀಗಳ ಆಪ್ತರೊಬ್ಬರು ಹೇಳಿದರು.

ಆಡಿಯೊ ವೈರಲ್ : ರಾಜ್ಯದ ಹಲವು ಸ್ವಾಮೀಜಿಗಳ ಕುರಿತು ಮಹಿಳೆಯರಿಬ್ಬರು ಮಾತನಾಡಿದ ಮೊಬೈಲ್ ಆಡಿಯೊ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ನೇಗಿನಹಾಳದ ಗುರು ಮಡಿವಾಳೇಶ್ವರ ಮಠದ ಸ್ವಾಮಿ ಕೂಡ ಅಂಥವರೇ, ಅವರೂ ಕೆಟ್ಟವರೆ” ಎಂಬ ಮಾತೂ ಈ ಆಡಿಯೊದಲ್ಲಿ ಕೇಳಿಬಂದಿತ್ತು.ಬೆಳಗಾವಿಯ ಸತ್ಯಕ್ಕ (ತಮಿಳನಾಡ್ ಸತ್ಯಕ್ಕ ಎಂದೇ ಹೆಸರುವಾಸಿ) ಎಂಬ ಮಹಿಳೆ ಗಂಗಾವತಿಯ ಇನ್ನೊಬ್ಬ ಮಹಿಳೆಗೆ ಫೋನ್ ಮಾಡಿ ಮಾತನಾಡಿದ್ದು ಈ ಆಡಿಯೊದಲ್ಲಿದೆ.ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಪ್ರಕರಣ ಹೊರಬಿದ್ದ ಮೇಲೆ ಆ ಮಠದ ವಾತಾವರಣ ಹೀಗಿತ್ತು ಎಂಬ ಬಗ್ಗೆಯೇ ಈ ಮಹಿಳೆಯರು ಮಾತನಾಡಿದ್ದಾರೆ.

ಈ ಆಡಿಯೊ ವೈರಲ್ ಆದಾಗಿನಿಂದ ಮಡಿವಾಳೇಶ್ವರ ಮಠದ ಶ್ರೀಗಳು ನೊಂದಿದ್ದರು ಎಂದು ಅವರ ಶಿಷ್ಯರು ಹೇಳಿದ್ದಾರೆ.