ಮನೆ ಸುದ್ದಿ ಜಾಲ ಚಾಮುಂಡೇಶ್ವರಿ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ: ಪರಿಶೀಲನೆ

ಚಾಮುಂಡೇಶ್ವರಿ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ: ಪರಿಶೀಲನೆ

0

ಮೈಸೂರು(Mysuru): ಚಾಮುಂಡೇಶ್ವರಿ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿರುವ ಕೆ.ಹೆಮ್ಮನಹಳ್ಳಿ-ಮಾಣಿಕ್ಯಪುರ ರಸ್ತೆಗೆ  ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ಪಕ್ಜದಲ್ಲಿರುವ ಪುಟ್ಟಸ್ವಾಮಿಯವರ ಮನೆಗೆ ನೀರು ತುಂಬಿ, ಅಪಾರ ನಷ್ಟವಾಗಿದೆ. ಕೆ.ಹೆಮ್ಮನಹಳ್ಳಿ ಗ್ರಾಮದ ಸರ್ವೆ ನಂಬರ್ ನಲ್ಲಿ ಕೆಲವೊಂದು ಬಡಾವಣೆಗಳು ನಿರ್ಮಾಣಗೊಂಡಿದ್ದು, ಆ ಬಡಾವಣೆಗಳು ಪೂರ್ಣಯ್ಯನಾಲೆಗಳನ್ನು ಒತ್ತುವರಿ ಮಾಡಿರುವುದಾಗಿ ಸಾರ್ವಜನಿಕರು ಶಾಸಕರಿಗೆ ದೂರಿದರು.

ಪುಟ್ಟಸ್ವಾಮಿಯವರು ಸಾಕಿದ್ದ ಸುಮಾರು 1000 ನಾಟಿ ಕೋಳಿಯಲ್ಲಿ 800 ನಾಟಿ ಕೋಳಿಗಳು ಮಳೆಯಿಂದಾಗಿ ಸಾವಿಗಿಡಾಗಿವೆ, ಸರ್ಕಾರವತಿಯಿಂದ ಸೂಕ್ತ ಪರಿಹಾರವನ್ನು ನೀಡುವ ಬಗ್ಗೆ ಭರವಸೆ ನೀಡಿದರು.

ನಂತರ ಕೆ.ಹೆಮ್ಮನಹಳ್ಳಿ ಗ್ರಾಮದ ಚಿಕ್ಕೆರೆ ಹಿಂಭಾಗದಲ್ಲಿರುವ ಗಂಗಾಧರ್ ರವರ ಕೋಳಿ ಫಾರಂನಲ್ಲಿ ಸಾಕಿದ 4000 ಕೋಳಿಗಳು ಮಳೆಯ ನೀರು ನುಗ್ಗಿ ಸಾವಿಗೀಡಾಗಿರುವುದನ್ನು ಪರಿಶೀಲಿಸಿದರು.

ಸಾಹುಕಾರಹುಂಡಿ ಕೆರೆಯಿಂದ ಪೂರ್ಣಯ್ಯ ನಾಲೆ ಒತ್ತುವರಿಯಾಗಿದ್ದು ನಾಲೆ ನೀರು ಜಮೀನುಗಳಿಗೆ ನುಗ್ಗಿ ರೈತರು ಬೆಳೆದ ಅಪಾರಬೆಳೆ ನಷ್ಟವಾಗಿರುವುದನ್ನು ಗಮನಿಸಿದರು.

ನಂತರ ಮೂಗನಹುಂಡಿ ಗ್ರಾಮಕ್ಕೆ ಬೇಟಿ ನೀಡಿದ ಶಾಸಕರು ಮೂಗನಹುಂಡಿ ಕೆರೆ ತುಂಬಿ‌ ಕೋಡಿ‌ ಬಿದ್ದು ಕೋಡಿ ನೀರು ಮೂಗನಹುಂಡಿ ಮತ್ತು ತಿಬ್ಬಯ್ಯನಹುಂಡಿ ರಸ್ತೆಯು ಕೊಚ್ಚಿಕೊಂಡು ಹೋಗಿ ಅಪಾರವಾದ ಬೆಳೆ ನಷ್ಟವಾಗಿರುವುದನ್ನು ಪರಿಶೀಲಿಸಿದರು.

ಸಣ್ಣ ನೀರಾವರಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಮೃತ್ಯುಂಜಯರವರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಬೊಮ್ಮೇನಹಳ್ಳಿ ಕೆರೆ, ಹುಯಿಲಾಳು ಕೆರೆ, ಜಟ್ಟಿಹುಂಡಿ ಕೆರೆ, ಚಿಕ್ಕೆಕೆರೆ, ಸಾಹುಕಾರಹುಂಡಿ ಕೆರೆಗಳು ತುಂಬಿ ಕೋಡಿ ಬಿದ್ದು ನೀರು ನಾಲೆಯಲ್ಲಿ ಹರಿಯಲು ಆಗದೆ ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟವಾಗಿದೆ, ರಸ್ತೆಗಳು ಕೊಚ್ಚಿಕೊಂಡು ಹೊಗಿವೆ, ಆದ್ದರಿಂದ ಕೂಡಲೇ ತಮ್ಮ ಇಲಾಖೆಯಿಂದ ಒಂದು ತಂಡವನ್ನು ರಚಿಸಿ, ನಾಲೆಗಳ ಹೂಳು ತೆಗೆಯುವ ಬಗ್ಗೆ ಹಾಗೂ ತೂಬುಗಳ ರಿಪೇರಿ, ಸೇತುವೆಗಳ ನಿರ್ಮಾಣ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿದರು.

5 ಲಕ್ಷ ದ ಚೆಕ್ ವಿತರಣೆ

ಇತ್ತೀಚಗೆ ಬಿದ್ದ ಬಾರಿ ಮಳೆಯಿಂದ ಮಳೆ ನೀರನಲ್ಲಿ ಕೊಚ್ಚಿ ಕೊಂಡು ಹೋಗಿ ಸಾವೀಗಿಡಾಗಿದ್ದ ಮಾವಿನಹಳ್ಳಿ ಗ್ರಾಮದ ಮಹೇಶ್ ರವರ ಪತ್ನಿ ರಾಜಮ್ಮರವರ ಮಾವಿನಹಳ್ಳಿ ಮನೆಗೆ ತೆರಳಿ ಸರ್ಕಾರದ ವತಿಯಿಂದ 5 ಲಕ್ಷ ದ ಪರಿಹಾರದ ಚೆಕ್ ನ್ನು ವಿತರಿಸಿದರು.

ತಾ.ಪಂ. ಇ.ಓ. ಗಿರೀಶ್, ಎ.ಇ.ಇ.ಮಮತಾ, ಉಪ ತಹಶಿಲ್ದಾರ್ ಗಳಾದ ಕುಬೇರ್, ಮಂಜುನಾಥ, ರಾಜಸ್ವ ನಿರೀಕ್ಷಕರಾದ ಶಿವಕುಮಾರ್, ಲೋಹಿತ್ ಹಾಗೂ ಮುಖಂಡರು ಈ ಸಂದರ್ಭ ಉಪಸ್ಥಿತರಿದ್ದರು.