ಬೆಂಗಳೂರು(Bengaluru): ಮೈಸೂರು ನಗರಪಾಲಿಕೆಯ ಮೇಯರ್ ಆಗಿ ಆಯ್ಕೆಯಾದ ಶಿವಕುಮಾರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾದ ಡಾ. ಜಿ.ರೂಪ ಯೋಗೀಶ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅಭಿನಂದಿಸಿದ್ದಾರೆ.
ಶಿವಕುಮಾರ್ ಅವರು 3 ಬಾರಿ ಕಾರ್ಪೊರೇಟರ್ ಆಗಿ ಅನುಭವ ಹೊಂದಿದ್ದಾರೆ. ಹಿಂದುಳಿದ ವರ್ಗದ ಮುಖಂಡರಾಗಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡವರು. ಹಿಂದುಳಿದ ವರ್ಗಕ್ಕೆ ಸೇರಿದ ಡಾ. ಜಿ.ರೂಪ ಯೋಗೀಶ್ ಅವರು ಡಾಕ್ಟರೇಟ್ ಪದವಿ ಪಡೆದವರು. ಇವರ ನೇತೃತ್ವದಲ್ಲಿ ಮೈಸೂರು ನಗರವು ಸಮಗ್ರ ಅಭಿವೃದ್ಧಿ ಹೊಂದುವಂತಾಗಲಿ ಎಂದು ಅವರು ಹಾರೈಸಿದ್ದಾರೆ.














