ಮನೆ ಕಾನೂನು ಆರ್‌ಯುಪಿಪಿ ತೆರಿಗೆ ವಂಚನೆ ಆರೋಪ:  ವಿವಿಧ ರಾಜ್ಯಗಳಲ್ಲಿ ಐಟಿ ದಾಳಿ

ಆರ್‌ಯುಪಿಪಿ ತೆರಿಗೆ ವಂಚನೆ ಆರೋಪ:  ವಿವಿಧ ರಾಜ್ಯಗಳಲ್ಲಿ ಐಟಿ ದಾಳಿ

0

ನವದೆಹಲಿ(New delhii): `ನೋಂದಾಯಿತ, ಮಾನ್ಯತೆ ಇಲ್ಲದ ರಾಜಕೀಯ ಪಕ್ಷ’ಗಳ (ಆರ್‌ಯುಪಿಪಿ) ವಿರುದ್ಧದ ತೆರಿಗೆ ವಂಚನೆ ಆರೋಪ ಹಾಗೂ ಸಂಶಯಾಸ್ಪದ ಹಣಕಾಸು ವ್ಯವಹಾರಗಳ ಕುರಿತ ತನಿಖೆಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿದ್ದಾರೆ.

ಗುಜರಾತ್, ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸಗಡ, ಹರಿಯಾಣ ಸೇರಿದಂತೆ ಕನಿಷ್ಠ 110 ಸ್ಥಳಗಳಲ್ಲಿ ಬುಧವಾರ ದಾಳಿಗಳನ್ನು ನಡೆಸಲಾಗಿದೆ ಎಂದು ಇಲಾಖೆ ಮೂಲಗಳು ಹೇಳಿವೆ.

ಆರ್‌ಯುಪಿಪಿಗಳು ಹಾಗೂ ಅವರು ಪ್ರವರ್ತಕರ ಆದಾಯದ ಮೂಲ ಹಾಗೂ ವೆಚ್ಚ ಕುರಿತು ಇಲಾಖೆಯು ತನಿಖೆ ಕೈಗೊಂಡಿದೆ. ಕಾನೂನು ಬಾಹಿರವಾಗಿ ಈ ಪಕ್ಷಗಳು ದೇಣಿಗೆ ಪಡೆಯುತ್ತಿವೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಯುಪಿಪಿಗಳಿಗೆ ಸಂಬಂಧಿಸಿ ಇತ್ತೀಚೆಗೆ ಚುನಾವಣಾ ಆಯೋಗವು ಮಾಡಿದ್ದ ಶಿಫಾರಸಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಆರ್‌ಯುಪಿಪಿಗಳಿಗೆ ಸಂಬಂಧಿಸಿ ಇತ್ತೀಚೆಗೆ ಆಯೋಗವು ಭೌತಿಕ ಪರಿಶೀಲನೆ ಕೈಗೊಂಡಿತ್ತು. ಈ ಪೈಕಿ ಅಸ್ತಿತ್ವದಲ್ಲಿಯೇ ಇರದ 198 ಪಕ್ಷಗಳನ್ನು ಆರ್‌ಯುಪಿಪಿ ಪಟ್ಟಿಯಿಂದ ಆಯೋಗವು ತೆಗೆದುಹಾಕಿತ್ತು.

ಅಧಿಕೃತ ಮೂಲಗಳ ಪ್ರಕಾರ, ದೇಶದಲ್ಲಿ 2,800 ನೋಂದಾಯಿತ, ಮಾನ್ಯತೆರಹಿತ ಪಕ್ಷಗಳಿವೆ.