ಜಗದೋದ್ಧಾರನ ಆಡಿಸಿದಳೆ ಶೋದಾ
ಜಗದೋದ್ಧಾರನ (ಪ)
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ (ಅ ಪ)
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆಯಶೋದೆ (1)
ಅಣೋರಣೀಯನ ಮಹತೋ ಮಹಿಮನ
ಅಪ್ರಮೇಯನ ಆಡಿಸಿದಳೆಶೋದಾ (2)
ಪರಮ ಪುರುಷನ ಪರವಾಸುದೇವನ
ಪುರಂದರ ವಿಠಲನ ಆಡಿಸಿದಳೆಶೋದಾ (3)
Saval TV on YouTube