ಮನೆ ಉದ್ಯೋಗ ಕೆಹೆಚ್’ಪಿಟಿಯಲ್ಲಿ ಪ್ರಾಜೆಕ್ಟ್ ಸೂಪರ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

ಕೆಹೆಚ್’ಪಿಟಿಯಲ್ಲಿ ಪ್ರಾಜೆಕ್ಟ್ ಸೂಪರ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನ

0

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್​ನಲ್ಲಿ ಪ್ರಾಜೆಕ್ಟ್​ ಸೂಪರ್​ವೈಸರ್​​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಕ್ಷೇತ್ರ ನಿರ್ವಹಣೆಯಲ್ಲಿ ಕೆಲಸ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗೆ ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್​ 15 ಆಗಿದೆ.

ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾನಿಲಯಗಳಿಂದ ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ವಯಸ್ಸಿನ ಮಿತಿ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ವಯಸ್ಸಿನ ಮಿತಿಯನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ
ಅನುಭವ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನ

ಹುದ್ದೆಯ ಜವಾಬ್ದಾರಿ
ಜಿಲ್ಲೆಗಳಲ್ಲಿ ಯೋಜನೆಯ ಅನುಷ್ಠಾನವನ್ನು ಮುನ್ನಡೆಸಬೇಕು
ಜಿಲ್ಲಾ ಲೀಡ್‌ನೊಂದಿಗೆ ನಿಕಟವಾಗಿ ಕೆಲಸ ಮಾಡಿ ಮತ್ತು ಎಲ್​ಟಿಬಿಊ ಸಂಯೋಜಕರು ಮತ್ತು ಟೆಲಿ-ಕೌನ್ಸೆಲರ್‌ಗಳ ತಂಡವನ್ನು ನಿರ್ವಹಿಸಿ
ಮೈಕ್ರೋ ಯೋಜನೆಗಳನ್ನು ಅಭಿವೃದ್ಧಿಪಡಿಸಲು ತಂಡದೊಂದಿಗೆ ನಿಕಟವಾಗಿ ಸಂಘಟಿಸಬೇಕು
ಚಟುವಟಿಕೆಗಳ ತಡೆರಹಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾ ಮಟ್ಟದ ಕಾರ್ಯಕ್ರಮ ಸಿಬ್ಬಂದಿ ಮತ್ತು ಪಿಪಿಎಸ್​ಎ ಸಿಬ್ಬಂದಿಯನ್ನು ಕೋ ಆರ್ಡಿನೇಟ್​ ಮಾಡಬೇಕು
ರಾಜ್ಯದಲ್ಲಿ ಆಗ್ಗಿದ್ದಾಂಗೆ ಕೆಲಸದ ಹಿನ್ನಲೆ ಸಂಚಾರ ಮಾಡಲು ಸಿದ್ದರಾಗಿರಬೇಕು
ಈಗಾಗಲೇ ಆರೋಗ್ಯವಲದಯಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ

ಅರ್ಜಿ ಸಲ್ಲಿಕೆ : ಇಮೇಲ್​ ಮೂಲಕ

ಇಮೇಲ್​ ವಿಳಾಸ: jobs@khpt.org

ಪ್ರಮುಖ ದಿನಾಂಕ

ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 5 ಸೆಪ್ಟೆಂಬರ್​​ 2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್​​ 2022

ಅಧಿಕೃತ ವೆಬ್‌ಸೈಟ್: khpt.org

ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

ಅಧಿಕೃತ ಅಧಿಸೂಚನೆಯಿಂದ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್, ಇತ್ಯಾದಿ ದಾಖಲೆಗಳನ್ನು ಅರ್ಜಿಯಲ್ಲಿ ದಾಖಲಿಸಿ

ಎಲ್ಲಾ ಮಾಹಿತಿಯನ್ನು ಪೂರ್ಣಗೊಳಿಸಿದ ನಂತರ, ಒದಗಿಸಿದ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ. ಬಳಿಕ ಮೇಲಿನ ಇಮೇಲ್​ ವಿಳಾಸಕ್ಕೆ ನಿಗದಿತ ದಿನಾಂಕಕ್ಕೆ ಮುನ್ನ ಕಳುಹಿಸಿ.