ಮನೆ ಕಾನೂನು ಶುಲ್ಕ ಪಡೆಯುವುದು ವಕೀಲರ ಹಕ್ಕು: ತೆಲಂಗಾಣ ಹೈಕೋರ್ಟ್

ಶುಲ್ಕ ಪಡೆಯುವುದು ವಕೀಲರ ಹಕ್ಕು: ತೆಲಂಗಾಣ ಹೈಕೋರ್ಟ್

0

ವಕೀಲರು ಕಕ್ಷಿದಾರರ ಮಧ್ಯವರ್ತಿ ಅಥವಾ ಏಜೆಂಟ್ ಅಲ್ಲ. ಶುಲ್ಕ ಪಡೆಯುವುದು ವಕೀಲರ ಹಕ್ಕು ಎಂದು ತೆಲಂಗಾಣ ಹೈಕೋರ್ಟ್ ತೀರ್ಪು ನೀಡಿದೆ.

ಕಾನೂನು ವೃತ್ತಿ ಮೂಲಭೂತವಾಗಿ ಸೇವಾ ಆಧಾರಿತ ವೃತ್ತಿಯಾಗಿದೆ. ಈ ವೃತ್ತಿಯಲ್ಲಿ ವಕೀಲರು ತನ್ನ ಕಕ್ಷಿದಾರನಿಗೆ ಜವಬ್ದಾರಿಯುತ ಸಲಹೆಗಾರರಾಗಿರುತ್ತಾರೆ . ತಮ್ಮ ಸೇವೆ ಅವರು ಸಂಪೂರ್ಣ ಶುಲ್ಕ ಪಡೆಯಲು ಅರ್ಹರಾಗಿರುತ್ತಾರೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಒಂದು ವೇಳೆ ಕಕ್ಷಿದಾರರಿಗೆ ತಮ್ಮ ನ್ಯಾಯವಾದಿಯ ಸೇವೆ ತೃತೃಪ್ತಿದಾಯಕ ಎನಿಸದಿದ್ದರೆ ನ್ಯಾಯಾಲಯದ ಅನುಮತಿ ಇಲ್ಲದೆ ಅವರನ್ನು ಬದಲಿಸಲು ಸಾಧ್ಯವಿಲ್ಲ ಮತ್ತು ಆ ನಿಟ್ಟಿನಲ್ಲಿ ತೃಪ್ತಿದಾಯಕ ವ್ಯವಸ್ಥೆ ಮಾಡುವವರೆಗೆ ವಕೀಲರ ಬದಲಾವಣೆಯನ್ನು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಶುಲ್ಕವು ವಕೀಲರು ನಿಜವಾಗಿ ನ್ಯಾಯಾಲಯದಲ್ಲಿ ಮಾಡಿದ ಕೆಲಸದ ಪ್ರಮಾಣವನ್ನು ಅದು ಅವಲಂಬಿಸಬೇಕಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ.