ಮನೆ ರಾಜ್ಯ ಶಿಕ್ಷಣ, ವೈದ್ಯಕೀಯ ವಿಜ್ಞಾನಗಳ ಸಂವಹನ ಹುಡುಕುವುದು ಸೂಕ್ತ: ಪ್ರೊ.ಜಿ.ಹೇಮಂತ್ ಕುಮಾರ್

ಶಿಕ್ಷಣ, ವೈದ್ಯಕೀಯ ವಿಜ್ಞಾನಗಳ ಸಂವಹನ ಹುಡುಕುವುದು ಸೂಕ್ತ: ಪ್ರೊ.ಜಿ.ಹೇಮಂತ್ ಕುಮಾರ್

0

ಮೈಸೂರು(Mysuru):  ಶಿಕ್ಷಣ ಮತ್ತು ವೈದ್ಯಕೀಯ ವಿಜ್ಞಾನಗಳ ನಡುವೆ ಸಂವಹನವನ್ನು ಹುಡುಕುವುದು ಬಹಳ ಸೂಕ್ತವಾಗಿದೆ. ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ವಿಭಾಗದ ವತಿಯಿಂದ ಟ್ರಾನ್ಸಲೇಷನ್ ರಿಸರ್ಚ್ ಕುರಿತು ದಕ್ಷಿಣ ಭಾರತದ ಮೊದಲ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.

ಐಸಿಎಂಆರ್ ಮಾರ್ಗಸೂಚಿಗಳನ್ನು ರೂಪಿಸುವಾಗ ಶಿಕ್ಷಣ ಮತ್ತು ವೈದ್ಯಕೀಯ ವಿಜ್ಞಾನಗಳ ನಡುವಿನ ಸಂಬಂಧವನ್ನು ತಿಳಿಸುತ್ತದೆ.  ಹೊಸ ಔಷಧಗಳು ಮತ್ತು ಚಿಕಿತ್ಸೆಗಳ ಅನ್ವೇಷಣೆಗೆ ಎಚ್ಚರಿಕೆಯ ವೈಜ್ಞಾನಿಕ ಪ್ರಯೋಗ, ಅಭಿವೃದ್ಧಿ ಮತ್ತು ಮೌಲ್ಯಮಾಪನದ ಅಗತ್ಯವಿದೆ ಎಂದು ಹೇಳಿದರು.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಸ್ಥೆಯು ಬಯೋಮೆಡಿಕಲ್ ಸಂಶೋಧನೆಯ ಸೂತ್ರೀಕರಣ, ಸಮನ್ವಯ ಮತ್ತು ಪ್ರಚಾರಕ್ಕಾಗಿ ಇರುವ ಒಂದು ಉನ್ನತ ಸಂಸ್ಥೆಯಾಗಿದೆ. ಅಲ್ಲದೆ.‌ ಇದು ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ. ಭಾಷಾಂತರ ಸಂಶೋಧನೆಯು ಪ್ರಯೋಗಾಲಯದಲ್ಲಿ ಅಥವಾ ಚಿಕಿತ್ಸಾಲಯಗಳಲ್ಲಿ ಮಾಡಿದ ವಿಜ್ಞಾನದ ಆವಿಷ್ಕಾರಗಳನ್ನು ತಿಳಿಸುತ್ತದೆ. ಜೊತೆಗೆ ಮನುಷ್ಯರಿಗೆ ನೇರವಾಗಿ ಪ್ರಯೋಜನಕಾರಿಯಾದ ವೈದ್ಯಕೀಯ ಆರೈಕೆಗೆ ಹೊಸ ಚಿಕಿತ್ಸೆಗಳು ಮತ್ತು ವಿಧಾನಗಳಾಗಿ ಮಾರ್ಪಡಿಸುತ್ತದೆ ಎಂದು ತಿಳಿಸಿದರು.

ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, ಬೇರೆ ಬೇರೆ ವಸ್ತು ಹಾಗೂ ವ್ಯಕ್ತಿಗಳನ್ನು ಭೇಟಿ‌ಮಾಡುವುದೇ ಟ್ರಾನ್ಸಲೇಷನ್ ರಿಸರ್ಚ್  ಉದ್ದೇಶ . ಮೂಲ‌ ಸಂಶೋಧನೆ ಹಾಗೂ ಕ್ಲಿನಿಕಲ್ ರಿಸರ್ಚ್ ಬಗ್ಗೆ ಇದು ಮಾತನಾಡುತ್ತದೆ. ಹೊಸ ಹೊಸ ಚಿಕಿತ್ಸಾ ವಿಧಾನಗಳು, ಜ್ಞಾನ, ಅನ್ವಯಕಗಳು, ರೋಗಪತ್ತೆ ಯಂತ್ರಗಳು ಬರಬೇಕಿದೆ. ಈ ಬಗ್ಗೆ ಆರೋಗ್ಯ ತಜ್ಞರು ಆಲೋಚಿಸಬೇಕಿದೆ. ಕ್ಲಿನಿಕಲ್ ಡಾಟಾವನ್ನು ಸಂಶೋಧಕರು ಬಳಕೆ‌ ಮಾಡಬೇಕಿದೆ ಎಂದರು. 

ಸಮ್ಮೇಳನದ ಕಿರುಹೊತ್ತಿಗೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಬೆಂಗಳೂರು ಜಯದೇವ ಹೃದಯ ರೋಗ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್ ಸಮ್ಮೇಳನ‌ ಉದ್ಘಾಟಿಸಿದರು.

ಯೂನಿವರ್ಸಿಟಿ ಮೆಡಿಕಲ್ ಸೆಂಟರ್‌ ನ ಡಾ.ಹರಿ. ಎಸ್‌. ಶರ್ಮ, ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎಸ್.ಮಾಲಿನಿ ಸೇರಿದಂತೆ ಇತರರು ಇದ್ದರು.