ಮನೆ ಸುದ್ದಿ ಜಾಲ ಸಾಮಾನ್ಯ ಜನರಿಗಾಗಿ ಸುಮಾರು 60 ದೇವಾಲಯಗಳನ್ನು ಸ್ಥಾಪನೆ ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರು: ಎಲ್.ನಾಗೇಂದ್ರ

ಸಾಮಾನ್ಯ ಜನರಿಗಾಗಿ ಸುಮಾರು 60 ದೇವಾಲಯಗಳನ್ನು ಸ್ಥಾಪನೆ ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರು: ಎಲ್.ನಾಗೇಂದ್ರ

0

ಮೈಸೂರು(Mysuru): ಹಿಂದಿನ ಕಾಲದಲ್ಲಿ ಸಾಮಾನ್ಯ ಜನರಿಗೆ  ದೇವಾಲಯದ ಒಳಗಡೆ ಹೋಗಲು ಅವಕಾಶ ಇರದ ಸಂದರ್ಭದಲ್ಲಿ ಅವರೇ ಒಂದು ದೇವಸ್ಥಾನ ಸ್ಥಾಪನೆ ಮಾಡುವ ಮೂಲಕ ಒಂದು ಹೊಸ ಅಲೋಕವನ್ನು ಹುಟ್ಟಾಕಿ, ಸುಮಾರು 60 ದೇವಾಲಯಗಳನ್ನು ಸ್ಥಾಪನೆ ಮಾಡಿದವರು ಬ್ರಹ್ಮಶ್ರೀ ನಾರಾಯಣ ಗುರು ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಲ್ ನಾಗೇಂದ್ರ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸೃತಿ ಇಲಾಖೆ, ಬ್ರಹ್ಮಶ್ರೀ ನಾರಾಯಣಗುರು ಜಯಂತೋತ್ಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಈಡಿಗ  ಸಮಾಜವು ಮೈಸೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದೆ ನಿಮ್ಮ ಸಮಿತಿ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಪ್ರಮುಖರು ಎಲ್ಲರೂ ಸೇರಿ ಮುಂದಿನ ದಿನಗಳಲ್ಲಿ ಅದ್ಭುತ ಕಾರ್ಯಕ್ರಮವನ್ನು ಮಾಡಿ ನಾರಾಯಣ ಗುರುಗಳು ಒಂದು  ವಿಶೇಷ ವ್ಯಕ್ತಿತ್ವವನ್ನು ಹೊಂದಿರುವವರು  ಎಂದು ಹೇಳಿದರು.

ಕೇರಳ ರಾಜ್ಯದಲ್ಲಿ ಮತ ಭೇದ ಹೆಚ್ಚಾಗಿ ಹಾಗೂ ಸಾಮಾಜಿಕ ಪಿಡುಗು ಇವೆಲ್ಲವನ್ನು ಕಡಿಮೆ ಮಾಡುವುದಕ್ಕೆ ಇಡೀ ಜೀವನವನ್ನೇ ಮುಡುಪಾಗಿಟ್ಟವರು, ಸಂಸ್ಕೃತ ಭಾಷೆಯಲ್ಲಿ ಪಂಡಿತರಾಗಿ ಕೇರಳದ ಸಮಾಜದಲ್ಲಿ ಅಸ್ಪೃಶ್ಯತೆ ಪಿಡುಗು ಹೋಗಲಾಡಿಸುವ ಉಪಾಯಗಳನ್ನು ಮೊದಲಿಗೆ ತಂದವರು ಇವರು  ಎಂದು ಹೇಳಿದರು.

ಮನೆ ಬಿಟ್ಟು ತಪಸ್ಸು ಮಾಡುತ್ತಾ ಗುಡ್ಡ ದಟ್ಟ ಅರಣ್ಯ ಗುಹೆಗಳಲ್ಲಿ ತಪಸ್ಸು ಮಾಡಿ ಸಾಧನೆಯನ್ನು ಮಾಡಿದ್ದಾರೆ. ಹಿಂದಿನ ಕಾಲದಲ್ಲಿಯೇ ಪ್ರಾಣಿಗಳ ಹತ್ಯೆಗಳನ್ನು ಖಂಡಿಸಿದ ಮಹಾನ್ ವ್ಯಕ್ತಿ  ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ತಿಳಿಸಿದರು.

ಸಂತ  ಫಿಲೋಮಿನಾ ಪದವಿ ಕಾಲೇಜಿನ  ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಧರ್ ಮೂರ್ತಿ ಅವರು ಮಾತನಾಡಿ ಎಲ್ಲಾ ಮಹನೀಯರ ಗುಣಲಕ್ಷಣಗಳನ್ನು ಇಟ್ಟುಕೊಂಡು ಹೋರಾಟ ಮಾಡಿದ ಏಕೈಕ ಮಹಾಗುರು ಬ್ರಹ್ಮಶ್ರೀ ನಾರಾಯಣ ಗುರು ಅವರು ಎಂದು ಹೇಳಿದರು.

ಭಾರತದ ಹಿರಿಮೆ ಏನು ಎಂದು ಮೊದಲಿಗೆ ತೋರಿಸು ಕೊಟ್ಟವರು ಸ್ವಾಮಿ ವಿವೇಕಾನಂದರು ಹಾಗೂ ಅಂಬೇಡ್ಕರ್ ಅವರು ಕೇವಲ ದಲಿತ ಭಾಸ್ಕರ ಅಲ್ಲ ಭಾರತದ ಭಾಸ್ಕರ್ ಅಂಬೇಡ್ಕರ್ ಅವರು  ಹಾಗೆಯೇ ನಾರಾಯಣ ಗುರುಗಳು ಮಹಾನ್ ಮಾನವತಾವಾದಿ, ಸಾಮಾಜಿಕ ಪರಿವರ್ತನಾ ಕಾರ, ಹೋರಾಟಗಾರ, ಚಿಂತಕ, ಶಿಕ್ಷಕ, ರಕ್ಷಕ, ಮಾರ್ಗದರ್ಶಕ ಇವರು ಎಂದು ಹೇಳಿದರು.

ನಾರಾಯಣ ಗುರುಗಳು  1856 ಆಗಸ್ಟ್ 20ರಂದು  ಜನಿಸಿದರು.  ಇಂದು ನಾವು 167ನೇ ಜಯಂತಿಯನ್ನು  ಆಚರಿಸುತ್ತಿದ್ದೇವೆ ಇವತ್ತು ಎಲ್ಲಾ ಹೆಣ್ಣು ಮಕ್ಕಳು ಗೌರವದಿಂದ ಬಾಳುವಂತಹ ಕೆಲಸವನ್ನು ಇವರು ಮಾಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರಾದ  ಶಿವಕುಮಾರ್, ಮೈಸೂರು-ಚಾಮರಾಜನಗರ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷರಾದ ಎಂ.ಕೆ.ಪೋತ್ ರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ  ಮಲ್ಲಿಕಾರ್ಜುನ ಸ್ವಾಮಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ  ಡಾ. ಸುದರ್ಶನ್  ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.