ಮನೆ ಅಪರಾಧ ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಮರು ಪರೀಕ್ಷೆಗೆ ಒತ್ತಾಯ

ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಮರು ಪರೀಕ್ಷೆಗೆ ಒತ್ತಾಯ

0

ಹುಬ್ಬಳ್ಳಿ(Hubballi): ರೈಲ್ವೆ ಪದೋನ್ನತಿ ಪರೀಕ್ಷೆಯಲ್ಲಿ ಅಕ್ರಮ  ನಡೆದಿದೆ ಎನ್ನಲಾಗಿದ್ದು, ರೈಲ್ವೆ ಪರೀಕ್ಷೆ ವಿರುದ್ಧ ರೈಲ್ವೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿ ಮರು ಪರೀಕ್ಷೆಗೂ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿ ರೈಲ್ವೆ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಎದುರು ಸಿಬ್ಬಂದಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿ.ಟಿ.ಎಂ ಪರೀಕ್ಷಾರ್ಥಿಗಳು ಹುಬ್ಬಳ್ಳಿಯ ನೈರುತ್ಯ ರೈಲ್ವೆ ಜಿ. ಎಂ ಕಚೇರಿ ಬಳಿ ಹೋರಾಟ ನಡೆಸಿದ್ದು, ರೈಲ್ವೆ ಇಲಾಖೆಯಲ್ಲಿ ಪದೋನ್ನತಿಗಾಗಿ ನಡೆದಿದ್ದ ಸಿಇಟಿ ಸೆಪ್ಟೆಂಬರ್ 04 ರಂದು ಜಿಟಿಎಲ್ ಆಂತರಿಕ ಸ್ಪರ್ಧಾ ಪರೀಕ್ಷೆಯನ್ನು ಆನ್​ಲೈನ್​ ಮೂಲಕ ನಡೆಸಲಾಗಿತ್ತು. ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆ ವಾಟ್ಸ್​​​ಆ್ಯಪ್​ನಲ್ಲಿ ಹರಿದಾಡಿದೆ ಎಂಬ ಆರೋಪ ಕೇಳಿ ಬಂದಿದೆ.

147 ಹುದ್ದೆಗಳಿಗೆ ಒಟ್ಟು 4,685 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 200 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಶೇ. 95 ರಿಂದ 96 ರಷ್ಟು ಅಂಕ ಪಡೆದಿದ್ದು, ಮೇಲ್ನೋಟಕ್ಕೆ ಅಕ್ರಮ ನಡೆದಿದೆ ಅಂತ ಸಾಬೀತಾಗುತ್ತೆ ಅಂತ ಆರೋಪಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳುವಂತೆ ನೈರುತ್ಯ ರೈಲ್ವೆಯ ಜಿ. ಎಂಗೆ ಮನವಿ ಸಲ್ಲಿಕೆ ಮಾಡಿದ್ದು, ಮರು ಪರೀಕ್ಷೆಗೆ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಪರೀಕ್ಷೆ ನಡೆದು ಎಂಟು ದಿನಗಳಾಗಿವೆ. ಪ್ರಶ್ನೆಪತ್ರಿಕೆ ಲೀಕ್ ಆಗಿತ್ತು ಅಂತ ಈಗ ಕೆಲ ಅಭ್ಯರ್ಥಿಗಳು ಆರೋಪಿಸಿದ್ದಾರೆ. ಈ ಕುರಿತು ಪಾರದರ್ಶಕ ತನಿಖೆ ನಡೆಸೋದಾಗಿ ಸಿ.ಪಿ.ಆರ್.ಒ ಅನೀಶ್ ಹೆಗ್ಡೆ ಮಾಹಿತಿ ನೀಡಿದ್ದಾರೆ.