ಮನೆ ರಾಜಕೀಯ ರಾಜಕಾಲುವೆಗೆ ಹೆಚ್ಚಿನ ಪ್ರಾಶಸ್ತ್ಯ: ವಿಧಾನಸಭೆ ಕಲಾಪದಲ್ಲಿ ಸಿಎಂ ಭರವಸೆ

ರಾಜಕಾಲುವೆಗೆ ಹೆಚ್ಚಿನ ಪ್ರಾಶಸ್ತ್ಯ: ವಿಧಾನಸಭೆ ಕಲಾಪದಲ್ಲಿ ಸಿಎಂ ಭರವಸೆ

0

ಬೆಂಗಳೂರು(Bengaluru): ರಾಜಕಾಲುವೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತೇವೆ. ನಿರಂತರವಾಗಿ ರಾಜಕಾಲುವೆ ಕಾಮಗಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದ ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ, ಬೆಂಗಳೂರು ನೆರೆಯಿಂದ ಆಸ್ತಿ-ಪಾಸ್ತಿ ಪ್ರಾಣ ಹಾನಿಯಾಗಿದೆ. ಬ್ರಾಂಡ್ ಬೆಂಗಳೂರಿಗೂ ಹಾನಿ ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಮಳೆ ನೀರಿನ ಪ್ರವಾಹ. ಇದಕ್ಕೆ ರಾಜಕಾಲುವೆ ಅಭಿವೃದ್ಧಿಪಡಿಸುವುದು ಮುಖ್ಯ ಎಂದರು.

ಬೆಂಗಳೂರಿನಲ್ಲಿ 850 ಕಿ.ಮೀ ರಾಜಕಾಲುವೆ ಇದೆ. ಹಿಂದಿನ ಸರ್ಕಾರದಲ್ಲಿ 400 ಕಿ.ಮೀ ಅಭಿವೃದ್ಧಿಗೆ 1900 ಕೋಟಿ ರಾಜಕಾಲುವೆ ಅಭಿವೃದ್ಧಿಗೆ ನೀಡಿದೆ. ಕಳೆದ ಮೂರು ವರ್ಷದಲ್ಲಿ 70 ಕಿ.ಮೀ ಮಾತ್ರ ಅಭಿವೃದ್ಧಿ ಆಗಿದೆ. ಸಿಎಂ ಕೊಟ್ಟಿರುವ ಉತ್ತರ ಪ್ರಕಾರ 400 ಕಿ.ಮೀ ಅಭಿವೃದ್ಧಿ ಆಗಲು ಬಾಕಿ ಇದೆ. ರಾಜಕಾಲುವೆ ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದರು.

ಕಳೆದ ವರ್ಷ 1500 ಕೋಟಿ ಕೊಡುತ್ತೇವೆ ಎಂದು ಸಿಎಂ ಘೋಷಣೆ ಮಾಡಿದ್ದರು. ಆದರೆ ಇನ್ನೂ ಕಾಮಗಾರಿ ಆಗಿಲ್ಲ ಮತ್ತೆ ಪ್ರವಾಹ ಬಂದಿದೆ. ರಾಜಕಾಲುವೆ ಅಭಿವೃದ್ಧಿ ಪಡಿಸದೆ ಹೋದರೆ ಮಳೆ ನೀರು ಸಮಸ್ಯೆಗೆ ಪರಿಹಾರ ಇಲ್ಲ. ನನ್ನ ಕ್ಷೇತ್ರದಲ್ಲೂ 110 ಕೋಟಿ ಕೇಳಿದ್ದೆ ಆದರೆ 20 ಕೋಟಿ ಕೊಡಲಾಗಿದೆ. ಹೀಗಾದಾಗ ನೆರೆ ತಡೆಗಟ್ಟಲು ಹೇಗೆ ಸಾಧ್ಯ?ಎಂದು ಪ್ರಶ್ನಿಸಿದರು.

ಇದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ನೀಡಿ,ಇಷ್ಟು ದೊಡ್ಡ ಮಳೆ ಎಂದು ಬಂದಿಲ್ಲ. ರಾಜಕಾಲುವೆ ಅಂದಿನ ಇಂದಿನ ಕೆಪಾಸಿಟಿಗೂ ವ್ಯತ್ಯಾಸ ಇದೆ. ಕಾಂಗ್ರೆಸ್ ಕಾಲದಲ್ಲಿ ಮಂಜೂರು ಆಗಿದ್ದನ್ನೂ ನಾವು ಮಾಡ್ತಾ ಇದ್ದೇವೆ. ಎಲ್ಲಾ ತೆರವು ಮಾಡಿ ರಾಜಕಾಲುವೆ ಸಂಪೂರ್ಣ ಮಾಡೋಕೆ ಒಂದುವರೆ, ಎರಡು ವರ್ಷ ಬೇಕಾಗುತ್ತದೆ ಎಂದರು.

ಎಲ್ಲೆಲ್ಲಿ ಬಹಳ ಅಗತ್ಯವಿದೆ ಅಲ್ಲಿ ಕೆಲಸ ಆರಂಭ ಆಗಿದೆ. 1500 ಕೋಟಿ ಕೊಡಲಾಗಿದೆ. ಇನ್ನಷ್ಟು ಹಣ ಕೊಡ್ತೇವೆ. ಮಹಾದೇವಪುರದಲ್ಲಿ ಮೇಜರ್ ಇದೆ. ಹಳ್ಳಿಗಳನ್ನೂ ಅಲ್ಲಿ ಸೇರಿಸಿದ್ದೇವೆ. ಅಲ್ಲಿ ಕೆರೆಗಳು ತುಂಬಿ ಹರಿಯುತ್ತಿದೆ. ಮಹಾದೇವಪುರ ಕ್ಷೇತ್ರದಲ್ಲಿ 69 ಕೆರೆ ಇದೆ ಎಂದು ವಿವರಿಸಿದರು.