ಮನೆ ಆರೋಗ್ಯ ದಪ್ಪಗೆ ಇರುವವರು ಈ ಆಹಾರಗಳನ್ನು ತಿನ್ನಬಾರದು

ದಪ್ಪಗೆ ಇರುವವರು ಈ ಆಹಾರಗಳನ್ನು ತಿನ್ನಬಾರದು

0

ಇದ್ದಕ್ಕಿದ್ದಂತೆ ಹೊಟ್ಟೆಯ ಭಾಗದಲ್ಲಿ ಬೊಜ್ಜು ಅಧಿಕವಾಗಿ ಶೇಖರಣೆಯಾಗಿ, ಸಯಲೆಂಟಾಗಿ ಸೊಂಟದ ಗಾತ್ರ ಹೆಚ್ಚಾಗಲು ಈಗಿನ ಆಧುನಿಕ ಜೀವನಶೈಲಿಯಲ್ಲಿ ಜನರು ಅನುಸರಿಸುತ್ತಿರುವ ಆಹಾರ ಪದ್ಧತಿ, ಹಾಗೂ ದೈನಂದಿನ ವ್ಯಾಯಾಮ-ಯೋಗಾಭ್ಯಾಸಗಳನ್ನು ಅನುಸರಿಸದೇ ಇರುವುದು ನೇರವಾದ ಕಾರಣ ಎಂದು ಹೇಳಬಹುದು. ಈ ಬಗ್ಗೆ ಆರೋಗ್ಯ ತಜ್ಞರೇ ಹೇಳುವ ಪ್ರಕಾರ ಅತಿಯಾದ ಬೊಜ್ಜು ತೂಕ ಇದರಿಂದಾಗಿ, ದಿನಾ ಹೋದ ಹಾಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತಾ ಹೋಗುವುದು ಮನುಷ್ಯನ ಆರೋಗ್ಯಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ!

ಪ್ರಮುಖವಾಗಿ ಕೃತಕ ಸಿಹಿ ಅಂಶ ಹೊಂದಿರುವ ತಂಪು ಪಾನೀಯಗಳು

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಸಕ್ಕರೆ ಹಾಗೂ ಸಕ್ಕರೆ ಅಂಶ ಇರುವ ಯಾವುದೇ ಆಹಾರಗಳು ಹಾಗೂ ಪಾನೀಯಗಳಿಂದ ದೂರ ಇರುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಮುಖ್ಯ ಕಾರಣ ಸಕ್ಕರೆಯಲ್ಲಿ ಕಂಡು ಬರುವ ಅನಾರೋಗ್ಯ ಅಂಶಗಳು ಅಷ್ಟೇ ಅಲ್ಲದೆ, ಸಕ್ಕರೆಗೆ ಪರ್ಯಾಯವಾಗಿ ಬಳಸುವ ಕೃತಕ ಸಿಹಿ ಅಂಶಗಳು ಕೂಡ ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ.

ನಿಮಗೆ ಗೊತ್ತಿರಲಿ ಹಲವಾರು ತಂಪುಪಾನೀಯಗಳಲ್ಲಿ ಅಥವಾ ಸಂಸ್ಕರಿಸಿದ ಹಣ್ಣಿನ ರಸಗಳಲ್ಲಿ ಕೃತಕ ಸಕ್ಕರೆ ಅಂಶಗಳನ್ನು ಬಳಕೆ ಮಾಡಿರುತ್ತಾರೆ. ಇಂತಹ ಪಾನೀಯಗಳನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಇಲ್ಲಸಲ್ಲದ ಸಮಸ್ಯೆಗಳು ಕಂಡು ಬರುವ ಆಪತ್ತು ಅಧಿಕವಿರುತ್ತದೆ.

ಅಷ್ಟೇ ಯಾಕೆ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗುವುದು ಮಾತ್ರವಲ್ಲದೆ, ಮಧುಮೇಹ ಕಾಯಿಲೆಯಿಂದ ಹಿಡಿದು, ಸೊಂಟದ ಭಾಗದಲ್ಲಿ ಬೊಜ್ಜಿನ ಅಂಶ ಅಧಿಕವಾಗಿ ಬಿಡುತ್ತದೆ. ನೆನಪಿಡಿ ಅತಿಯಾಗಿ ಕೂಲ್ ಡ್ರಿಂಕ್ಸ್ ಅಥವಾ ತಂಪು ಪಾನೀಯ ಕುಡಿಯುವ ಅಭ್ಯಾಸ ಮಾಡಿಕೊಂಡವರಲ್ಲಿ ಕ್ರಮೇಣವಾಗಿ ಹೊಟ್ಟೆಯ ಭಾಗದಲ್ಲಿ ಬೊಜ್ಜಿನ ಅಂಶ ತುಂಬಿ ಕೊಂಡು ಹೊಟ್ಟೆಯ ಗಾತ್ರ ದಪ್ಪ ಆಗುವುದು ಮಾತ್ರವಲ್ಲದೆ, ದೇಹದ ತೂಕ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

ಐಸ್ ಕ್ರೀಮ್ ಸೇವನೆ ಬಿಡಿ

ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ಇಷ್ಟವಾಗುವ ಇಷ್ಟಪಟ್ಟು ತಿನ್ನುವಂತಹ ನೆಚ್ಚಿನ ಆಹಾರ ಪದಾರ್ಥ ಎಂದರೆ ಐಸ್ ಕ್ರೀಮ್. ಆದರೆ ನಿಮಗೆ ಗೊತ್ತಿರಲಿ, ಐಸ್ ಕ್ರೀಮ್ನ ರುಚಿ ಹೆಚ್ಚಾಗಲು ಕೂಡ ಕೃತಕ ಸಕ್ಕರೆ ಅಂಶ ಬಳಸುವುದರ ಜೊತೆಗೆ, ಹಾಲನ್ನು ಕೂಡ ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಎಷ್ಟೋ ದಿನಗಳಿಂದ ಶೇಖರಣೆ ಮಾಡಿಟ್ಟಿರುವ ಹಾಲಿನ ಪುಡಿಯನ್ನು ಕೂಡ ಮಿಕ್ಸ್ ಮಾಡುತ್ತಾರೆ. ಆದರೆ ಎಡವಟ್ಟು ಆಗುವುದು ಇಲ್ಲಿಯೇ! ಮುಖ್ಯವಾಗಿ ಹಾಲಿನಲ್ಲಿ

ಲ್ಯಾಕ್ಟೋಸ್ ಅಂಶದ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ. ಇದರಿಂದಾಗಿ ಕೆಲವರಿಗೆ ಅಜೀರ್ಣತೆ ಅಥವಾ ಅಲರ್ಜಿ ಸಮಸ್ಯೆ ಕಂಡು ಬರುತ್ತದೆ. ಇನ್ನೂ ಕೆಲವರಿಗೆ ಹಾಲಿನ ಪದಾರ್ಥದ ಸೇವನೆ ಯಿಂದ, ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಕೂಡ ಕಂಡು ಬರುತ್ತದೆ. ಅಷ್ಟೇ ಅಲ್ಲದೆ ಮೊದಲೇ ಹೇಳಿದ ಹಾಗೆ ಇದರಲ್ಲಿ ಕೃತಕ ಸಿಹಿ ಅಂಶ ಬೆರೆಸಿರುವುದರಿಂದ ಬೊಜ್ಜಿನ ಸಮಸ್ಯೆ ಕೂಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಪಾಸ್ತಾ

ಮೈದಾ ಹಿಟ್ಟಿನಿಂದ ತಯಾರು ಮಾಡುತ್ತಾರೆ ಎಂಬ ಮಾತಿದೆ. ಆದರೆ ನಿಮಗೆ ಗೊತ್ತಿರಲಿ ಸಕ್ಕರೆ, ಮೈದಾ ಇವೆಲ್ಲಾ ಆರೋಗ್ಯಕ್ಕೆ ದೊಡ್ಡ ಶತ್ರುಗಳು ಇದ್ದ ಹಾಗೆ! ಇನ್ನು ಪಾಸ್ತಾದಲ್ಲಿ ಕಡಿಮೆ ಪ್ರಮಾಣದಲ್ಲಿ ನಾರಿನಾಂಶ, ಪೌಷ್ಟಿಕ ಸತ್ವಗಳು ಮತ್ತು ಪ್ರೊಟೀನ್ ಅಂಶಗಳು ಕಂಡು ಬರುವುದರಿಂದ ಆರೋಗ್ಯದಲ್ಲಿ, ಬಹಳ ಬೇಗನೆ ಅನಾರೋಗ್ಯಕರ ಸಮಸ್ಯೆಗಳು ಕಂಡು ಬರಲು ಶುರುವಾಗಿ ಬಿಡುತ್ತದೆ.

ಪ್ರಮುಖವಾಗಿ ಪಾಸ್ತಾ ಬಹಳ ಬೇಗನೆ ನಮ್ಮ ದೇಹದಲ್ಲಿ ಜೀರ್ಣ ವಾಗುವುದರಿಂದ ಇನ್ಸುಲಿನ್ ಪ್ರಮಾಣದ ಮಟ್ಟ ಏರಿಕೆ ಆಗುವ ಜೊತೆಗೆ ದೇಹದಲ್ಲಿ ಕೊಬ್ಬಿನ ಅಂಶ ಶೇಖರಣೆ ಆಗುತ್ತಾ ಹೋಗುತ್ತದೆ, ಇದರಿಂದಾಗಿ ಸೊಂಟದ ಭಾಗದಲ್ಲಿ ಬೊಜ್ಜಿನ ಪ್ರಮಾಣ ಕೂಡ ಅತಿಯಾಗುತ್ತಾ ಹೋಗುತ್ತದೆ.

ಆರೋಗ್ಯ ತಜ್ಞರೇ ಹೇಳುವ ಹಾಗೆ ಕಡಿಮೆ ಪ್ರಮಾಣದಲ್ಲಿ ಪ್ರೋಟೀನ್ ಹಾಗೂ ನಾರಿನಾಂಶ ಇರುವ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ, ಜೀರ್ಣಕ್ರಿಯೆ ಪ್ರಕ್ರಿಯೆ ಜಾಸ್ತಿ ಆಗುತ್ತಾ ಹೋಗುತ್ತದೆ. ಇದರಿಂದಾಗಿ ಪದೇ ಪದೇ ಹಸಿವು ಕೂಡ ಜಾಸ್ತಿ ಆಗುತ್ತದೆ. ಇಂತಹ ಸಂದರ್ಭದಲ್ಲಿ ಅನಾರೋಗ್ಯ ಆಹಾರಗಳನ್ನು ಕೂಡ ನಾವು ಜಾಸ್ತಿ ಸೇವನೆ ಮಾಡುವುದರಿಂದ, ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಶೇಖರಣೆಗೊಂಡು, ಕೊನೆಗೆ ಬೊಜ್ಜಿನ ಅಂಶ ವಿಪರೀತ ಆಗುತ್ತದೆ.

ಕೊನೆಯ ಮಾತು

ಸಾಧ್ಯವಾದಷ್ಟು ಪ್ಯಾಕ್ ಮಾಡಿದ ಆಹಾರಗಳಿಂದ ದೂರವಿರಿ. ಉದಾಹರಣೆಗೆ ಬ್ರೆಡ್, ಬಿಸ್ಕೆಟ್, ಪರೋಟ ಪ್ಯಾಕೆಟ್ ಹಣ್ಣಿನ ಜ್ಯೂಸ್ಗಳು ಇತ್ಯಾದಿಗಳು. ಯಾಕೆಂದರೆ ಇದರಲ್ಲಿ ಕೃತಕ ಸಕ್ಕರೆ ಅಂಶ ಮತ್ತು ಸಂಸ್ಕರಿಸಲ್ಪಟ್ಟ ಆಹಾರ ಪದಾರ್ಥಗಳು ಜಾಸ್ತಿ ಇರುತ್ತವೆ

ಮೈದಾ ಹಿಟ್ಟಿನಿಂದ ಮಾಡಿದ ಆಹಾರಗಳಿಂದ ದೂರವಿರಿ. ಉದಾಹರಣೆಗೆ ಹೇಳುವುದಾದರೆ, ಮೈದಾ ಹಿಟ್ಟಿನಿಂದ ಮಾಡಿದ ಬ್ರೆಡ್, ಬಿಸ್ಕೆಟ್, ಪರೋಟ ಇತ್ಯಾದಿ. ಇದರ ಹೊರತಾಗಿ ಗೋಧಿ ಹಿಟ್ಟಿನ ಮತ್ತು ಇತರ ಧಾನ್ಯಗಳನ್ನು ಬಳಸಿ ಮಾಡಿದಂತಹ ಚಪಾತಿ ಅಥವಾ ಬ್ರೆಡ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ

ಸಾಧ್ಯವಾದಷ್ಟು ಎಣ್ಣೆಯಲ್ಲಿ ಕರಿದ ಆಹಾರಗಳನ್ನುತಿನ್ನಬೇಡಿ. ಸಾಧ್ಯವಾದಷ್ಟು ಹೆಚ್ಚು ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ