ಮನೆ ರಾಜ್ಯ ಬಿಜೆಪಿಗೆ ‘ಬಲಾತ್ಕಾರಿ ಜನತಾ ಪಾರ್ಟಿ’ ಎಂಬ ಹೆಸರೇ ಸೂಕ್ತ: ಕಾಂಗ್ರೆಸ್

ಬಿಜೆಪಿಗೆ ‘ಬಲಾತ್ಕಾರಿ ಜನತಾ ಪಾರ್ಟಿ’ ಎಂಬ ಹೆಸರೇ ಸೂಕ್ತ: ಕಾಂಗ್ರೆಸ್

0

ಬೆಂಗಳೂರು(Bengaluru): ಬಿಜೆಪಿಗೆ ‘ಬಲಾತ್ಕಾರಿ ಜನತಾ ಪಾರ್ಟಿ’ ಎಂಬ ಹೆಸರೇ ಸೂಕ್ತ ಎಂದು ಕಾಂಗ್ರೆಸ್‌ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಜೆಪಿ ಸದಸ್ಯನೊಬ್ಬ ಆರೋಪಿಯಾಗಿದ್ದಾನೆಂದು ವರದಿಯಾಗಿರುವ ಕುರಿತು ಟ್ವಿಟ್ಟರ್ ನಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ.

ಕಚ್ಚೆಯ ಬಗ್ಗೆ ಮಾತನಾಡಿದ್ದ ಸಿ.ಟಿ.ರವಿ ಅವರೇ, ಕಚ್ಚೆ ಹರುಕರೆಲ್ಲ ಬಿಜೆಪಿಯಲ್ಲೇ ಇರುವುದು ಕಾಕತಾಳೀಯವೋ ಅಥವಾ ಬಿಜೆಪಿ ಸೇರಲು ಇರಲೇಬೇಕಾದ ಬೇಸಿಕ್ ಅರ್ಹತೆಯೋ ? ಎಂದು ಪ್ರಶ್ನಿಸಿದೆ.

‘ಬೇಟಿ ಬಚಾವೋ’ ಎನ್ನುವ ಬಿಜೆಪಿಯಲ್ಲಿ ಬೆಂಗಳೂರಿಂದ ಬೆಳಗಾವಿಯವರೆಗೂ ಸ್ತ್ರೀ ಪೀಡಕರು, ಅತ್ಯಾಚಾರಿಗಳೇ ತುಂಬಿದ್ದಾರೆ ಎಂದು ಟ್ವೀಟಿಸಿದೆ.