ಮನೆ ಅಂತಾರಾಷ್ಟ್ರೀಯ ಕಠ್ಮಂಡುವಿನಲ್ಲಿ ಭೂ ಕುಸಿತ: 13 ಮಂದಿ ಸಾವು, 10 ಮಂದಿ ನಾಪತ್ತೆ

ಕಠ್ಮಂಡುವಿನಲ್ಲಿ ಭೂ ಕುಸಿತ: 13 ಮಂದಿ ಸಾವು, 10 ಮಂದಿ ನಾಪತ್ತೆ

0

ಕಠ್ಮಂಡು(Kathmandu): ಪಶ್ಚಿಮ ನೇಪಾಳದ ಅಚಾಮ್ ಜಿಲ್ಲೆಯ ಹಲವು ಭಾಗಗಳಲ್ಲಿ ಶನಿವಾರ ಮುಂಜಾನೆ ಭೂಕುಸಿತ ಸಂಭವಿಸಿದ್ದು, 13 ಮಂದಿ ಮೃತಪಟ್ಟಿದ್ದಾರೆ.

ಉಪ ಮುಖ್ಯ ಜಿಲ್ಲಾ ಅಧಿಕಾರಿ ದೀಪೇಶ್ ರಿಜಾಲ್ ಈ ಕುರಿತು ಮಾಹಿತಿ ನೀಡಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ 10 ಮಂದಿಯನ್ನು ರಕ್ಷಿಸಲಾಗಿದೆ. 10 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಭೂಕುಸಿತ ಸಂಭವಿಸಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ನೇಪಾಳದ ಗೃಹ ಸಚಿವರು ಆದೇಶಿಸಿದ್ದಾರೆ.