ಮನೆ ಉದ್ಯೋಗ ಕೇಂದ್ರ ರೈಲ್ವೇ ಇಲಾಖೆಯಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ

ಕೇಂದ್ರ ರೈಲ್ವೇ ಇಲಾಖೆಯಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ

0

ಕೇಂದ್ರ ರೈಲ್ವೇ ಇಲಾಖೆಯಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಭುಸಾವಲ್​ ವಿಭಾಗದಲ್ಲಿ ರೈಲ್ವೇ ಶಾಲೆ (ಆಂಗ್ಲ ಮಾಧ್ಯಮ)ದಲ್ಲಿ ವಿವಿಧ ವಿಷಯಗಳ ಪಾಠ ಮಾಡಲು ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 22 ಹುದ್ದೆಗಳ ಭರ್ತಿಗೆ ಮುಂದಾಗಲಾಗಿದ್ದು, ಇದಕ್ಕಾಗಿ ನೇರ ಸಂದರ್ಶನ ನಡೆಸಲು ತೀರ್ಮಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್​ 4 ರಂದು ನಡೆಯುವ ವಾಕ್​- ಇನ್​- ಇಂಟರ್​​ವ್ಯೂನಲ್ಲಿ ಭಾಗಿಯಾಗಬಹುದಾಗಿದೆ.

ಈ ಹುದ್ದೆಗಳು ಸಂಪೂರ್ಣವಾಗಿ ತಾತ್ಕಾಲಿಕವಾಗಿದೆ. 2022-23ನೇ ಪ್ರಸಕ್ತ ಸಾಲಿಗೆ ಈ ಹುದ್ದೆ ಆಯ್ಕೆ ನಡೆಯಲಿದೆ. ಈ ನೇಮಕಾತಿ ಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಸಂಸ್ಥೆ: ಕೇಂದ್ರ ರೈಲ್ವೇ ಇಲಾಖೆ
ಹುದ್ದೆಯ ಹೆಸರು: ಶಿಕ್ಷಕರು
ಒಟ್ಟು ಹುದ್ದೆ ಸಂಖ್ಯೆ: 22
ಕಾರ್ಯ ನಿರ್ವಹಣೆ ಸ್ಥಳ: ಭುಸಾವಲ್​- ಮಹಾರಾಷ್ಟ್ರ
ವೇತನ: 21,250- 27,500 ರೂ ಮಾಸಿಕ

ಶೈಕ್ಷಣಿಕ ಅರ್ಹತೆ: ನೇಮಕಾತಿ ನಿಯಮ ಅನುಸಾರ ಅಭ್ಯರ್ಥಿಯು ಅಧಿಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಜೊತೆಗೆ ಬಿಎಡ್​ ಪದವಿ ಪಡೆದಿರಬೇಕು.
ವಯೋಮಿತಿ: ನೇಮಕಾತಿ ನಿಯಮ ಅನುಸಾರ ಅಭ್ಯರ್ಥಿಯು ಕನಿಷ್ಟ 18 ಮತ್ತು ಗರಿಷ್ಟ 65 ವರ್ಷಗಳನ್ನು ಮೀರಿರಬಾರದು.

ಅರ್ಜಿ ಶುಲ್ಕ: ವಿನಾಯಿತಿ

ನೇರ ಸಂದರ್ಶನ ನಡೆಯುವ ಸ್ಥಳ
ಡಿಆರ್​ಎಂ ಕಚೇರಿ, ಭುಸಾವಲ್​​

ಪ್ರಮುಖ ದಿನಾಂಕಗಳು
ಅಧಿಕೃತ ಅಧಿಸೂಚನೆ ಬಿಡುಗಡೆ ದಿನಾಂಕ: 6 ಸೆಪ್ಟೆಂಬರ್​ 2022
ನೇರ ಸಂದರ್ಶನ ನಡೆಯುವ ದಿನಾಂಕ: 4 ಅಕ್ಟೋಬರ್​ 2022
ನೇರ ಸಂದರ್ಶನದ ಸಮಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ

ಅಧಿಕೃತ ವೆಬ್​ಸೈಟ್​: indianrailways.gov.in

ನೇರ ಸಂದರ್ಶನಕ್ಕೆ ದಾಖಲಾತಿ ಅವಶ್ಯ
ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ.

ಬಳಿಕ ಅಧಿಸೂಚನೆ ವೇಳೆ ನೀಡಲಾಗಿರುವ ನಿಗದಿತ ಅರ್ಜಿಗಳನ್ನು ಭರ್ತಿ ಮಾಡಬೇಕು
ಅಭ್ಯರ್ಥಿಗಳು ಒಂದು ಸೆಟ್ ಸ್ವಯಂ-ದೃಢೀಕರಿಸಿದ ಪ್ರತಿಗಳು, ಒಂದು ಪಾಸ್‌ಪೋರ್ಟ್ ಫೋಟೋ ಜೋತೆ ಪ್ರಶಂಸಾಪತ್ರಗಳನ್ನು ನೇರ ಸಂದರ್ಶನ ವೇಳೆ ಹಾಜರು ಪಡಿಸಬೇಕು.

ವಯಸ್ಸಿನ ದೃಢೀಕರಣ ಅಥವಾ ವಯಸ್ಸು ದಾಖಲಾಗಿರುವ ಎಸ್​ಎಸ್​ಎಲ್ಸಿ ಪ್ರಮಾಣ ಪ್ರತ್ರ, ಶೈಕ್ಷಣಿಕ ದಾಖಲೆ, ಅನುಭವ, ಸಂಶೋಧಾನ ಪತ್ರಗಳು

ನೇರ ಸಂದರ್ಶನದ ನಿಗದಿತ ದಿನದಂದು ಬೆಳಗ್ಗೆ 9.30ಕ್ಕೆ ಹಾಜರಾಗಬೇಕು.