ಮನೆ ರಾಷ್ಟ್ರೀಯ ಎಡರಂಗ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ದಮನ: ಕೇರಳ ರಾಜ್ಯಪಾಲ

ಎಡರಂಗ ಸರ್ಕಾರದ ವಿರುದ್ಧ ಧ್ವನಿಯೆತ್ತುವವರ ದಮನ: ಕೇರಳ ರಾಜ್ಯಪಾಲ

0

ತಿರುವನಂತಪುರ(Tiruvanantapuam): ಎಡರಂಗ ಸರ್ಕಾರವು ತನ್ನ ವಿರುದ್ಧ ಧ್ವನಿಯೆತ್ತುವವರನ್ನು ದಮನಿಸುತ್ತಿದೆ ಎಂದು ಕೇರಳ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್ ಸೋಮವಾರ ಆರೋಪಿಸಿದ್ದಾರೆ.

2019ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ತಮ್ಮ ವಿರುದ್ಧ ನಡೆದ ಪ್ರತಿಭಟನೆಯ ದೃಶ್ಯವಿರುವ ವಿಡಿಯೊವನ್ನು ಆರಿಫ್‌ ಅವರು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

ರಾಜಭವನದ ಸಭಾಂಗಣದಲ್ಲಿ ಈ ವಿಡಿಯೊವನ್ನು ಪ್ರದರ್ಶಿಸಿದ ಅವರು, ತಮ್ಮ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಂತೆ ತಡೆದಿರುವ ವ್ಯಕ್ತಿಯನ್ನು ತೋರಿಸಿ, ಈ ವ್ಯಕ್ತಿ ಈಗ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯದ ಕುಲಾಧಿಪತಿಯ ಅಧಿಕಾರಗಳನ್ನು ಮೊಟಕುಗೊಳಿಸುವ ಮಸೂದೆಯನ್ನು ಈಚೆಗೆ ಕೇರಳ ವಿಧಾನಸಭೆಯು ಅಂಗೀಕರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.