ಮನೆ ಆರೋಗ್ಯ ಆರೋಗ್ಯವಾಗಿರಲು ಈ ಆಹಾರ ಸೇವಿಸಿ

ಆರೋಗ್ಯವಾಗಿರಲು ಈ ಆಹಾರ ಸೇವಿಸಿ

0

ಆರೋಗ್ಯಕಾರಿ ಜೀವನ ನಡೆಸಬೇಕೆಂದರೆ, ಪೌಷ್ಟಿಕ ಸತ್ವಗಳು ಹೆಚ್ಚಾಗಿರುವ ಆಹಾರ ಪದಾರ್ಥ ಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕು ಎಂದ ವೈದ್ಯರೇ ಹೇಳುತ್ತಾರೆ. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ ಕಂದು ಬಣ್ಣದಿಂದ ಕೂಡಿದ ಆಹಾರ ಉತ್ಪನ್ನಗಳು!

ಸುವರ್ಣ ಗಡ್ಡೆ

• ನೋಡಲು ದಪ್ಪವಾಗಿ ಮೈತುಂಬಾ ಮಣ್ಣು ಮೆತ್ತಿಕೊಂಡು ವಿಚಿತ್ರವಾಗಿ ಕಾಣುವ ಈ ಕಂದು ಬಣ್ಣದ ಸುವರ್ಣ ಗೆಡ್ಡೆ ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಈ ತರಕಾರಿಯಲ್ಲಿ ವಿಟಮಿನ್ಸ್ ಅಂಶಗಳು ಮತ್ತು ಖನಿಜಾಂಶಗಳು ಅಪಾರ ಪ್ರಮಾಣದಲ್ಲಿ ಕಂಡುಬರುವುದರ ಜೊತೆಗೆ ಫೈಟೋನ್ಯೂಟ್ರಿ ಯೆಂಟ್ಸ್ ಎನ್ನುವ ನೈಸರ್ಗಿಕ ಅಂಶಗಳು ಈ ತರಕಾರಿಯಲ್ಲ ಯಥೇಚ್ಛ ವಾಗಿ ಸಿಗುವುದರಿಂದ, ದೀರ್ಘಕಾಲದಿಂದ ಬಳಲುತ್ತಿರುವ ಸಾಕಷ್ಟು ಆರೋಗ್ಯ ಸಮಸ್ಯೆಗಳು, ನಿಯಂತ್ರಣಕ್ಕೆ ಬರುತ್ತದೆ.

• ವಿಶೇಷವಾಗಿ ನಾವು ಸೇವನೆ ಮಾಡುವ ಆಹಾರ ಸರಿಯಾಗಿ ಜೀರ್ಣ ವಾಗಲು ನೆರವಾಗುವುದು ಮಾತ್ರ ವಲ್ಲದೆ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಹೃದಯದ ಸಮಸ್ಯೆಗಳು, ಮಧುಮೇಹ, ಕ್ಯಾನ್ಸರ್, ದೇಹ ಬೊಜ್ಜು ಇತ್ಯಾದಿ ಸಮಸ್ಯೆಗಳು ಈ ಕಂದುಬಣ್ಣದ ಸುವರ್ಣಗೆಡ್ಡೆ ಸೇವನೆಯಿಂದ ವಾಸಿಯಾಗುತ್ತದೆ ಎಂದು ಹೇಳುತ್ತಾರೆ.

ವಾಲ್ನಟ್ ಸೇವನೆ

• ಡ್ರೈಫ್ರೂಟ್ಸ್ ಗಳಲ್ಲಿ ವಾಲ್ನಟ್ ಕೂಡ ತುಂಬಾನೇ ದುಬಾರಿಯಾದ ಒಳಫಲ ಎಂದೇ ಹೆಸರು ಪಡೆದುಕೊಂಡಿದೆ. ಆದರೆ ದೇಹದ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವವನ್ನುಂಟು ಮಾಡುವ ಗುಣ ಲಕ್ಷಣಗಳನ್ನು ಒಳಗೊಂಡಿದೆ.

• ಸಾಮಾನ್ಯವಾಗಿ ಯಾವುದು ಮಾರುಕಟ್ಟೆಯಲ್ಲಿ ಸ್ವಲ್ಪ ದುಬಾರಿ ಎನಿಸುತ್ತದೆ ಅಂತಹ ಆಹಾರ ಪದಾರ್ಥದಿಂದ ಆರೋಗ್ಯದ ಲಾಭಗಳು ಸ್ವಲ್ಪ ಹೆಚ್ಚು ಎಂದು ಹೇಳಬಹುದು. ಇದಕ್ಕೊಂದು ಒಳ್ಳೆಯ ಉದಾಹರಣೆ ಎಂದರೆ, ಈ ಕಂದು ಬಣ್ಣದಲ್ಲಿರುವ ವಾಲ್ನಟ್ ಬೀಜಗಳು.

• ಪ್ರಮುಖವಾಗಿ ಈ ವಾಲ್ನಟ್ ಬೀಜಗಳಲ್ಲಿ ಕಂಡು ಬರುವ ಪಾಲಿಫಿನಾಲ್ ಅಂಶಗಳು ದೇಹದ ಉರಿಯೂತದ ಸಮಸ್ಯೆಯ ವಿರುದ್ಧ ಹೋರಾಡುವ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಜೊತೆಗೆ ದೀರ್ಘಕಾಲದ ಕಾಯಿಲೆಗಳಾದ ಮಧುಮೇಹ ಮತ್ತು ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ.

• ಈ ಬಗ್ಗೆ ಒಂದು ಸಂಶೋಧನೆಯಲ್ಲಿ ಹೇಳಿರುವ ಪ್ರಕಾರ, ಪ್ರತಿದಿನ ಒಂದೆರಡು ವಾಲ್ನಟ್ಗಳನ್ನು ಸೇವನೆ ಮಾಡುವ ಜನರಿಗೆ ಹೃದಯದ ಕಾಯಿಲೆ ಕಂಡುಬರುವ ಅಪಾಯ ಶೇಕಡ 10 ಪ್ರತಿಶತದಷ್ಟು ಕಡಿಮೆ ಇರುತ್ತದೆಯಂತೆ.

ಬಾದಾಮಿ ಬೀಜಗಳು

• ನಾವು ಈ ಮೊದಲೇ ಹೇಳಿದ ಹಾಗೆಯಾವುದು ಮಾರುಕಟ್ಟೆಯಲ್ಲಿ ಸ್ವಲ್ಪ ದುಬಾರಿ ಎನಿಸುತ್ತದೆ ಅಂತಹ ಆಹಾರ ಪದಾರ್ಥದಿಂದ ಆರೋಗ್ಯದ ಲಾಭಗಳು ಸ್ವಲ್ಪ ಹೆಚ್ಚು ಇದಕ್ಕೆ ಬಾದಾಮಿ ಬೀಜಗಳು ಕೂಡ ಹೊರತಲ್ಲ.

• ಅದರಲ್ಲೂ ದೀರ್ಘಕಾಲದಿಂದ ಸಕ್ಕರೆಕಾಯಿಲೆಯಿಂದ ಬಳಲುತ್ತಿರುವವರು, ಅಧಿಕ ರಕ್ತದ ಒತ್ತಡ ಇರುವವರು, ಅದೇ ರೀತಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ಹೊಂದಿದವರು ಆಗಾಗ ನೆನೆಸಿಟ್ಟ ಬಾದಾಮಿ ಬೀಜಗಳನ್ನು ಸೇವನೆ ಮಾಡುವುದ ರಿಂದ ಇಂತಹ ದೀರ್ಘಕಾಲದ ಕಾಯಿಲೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು ಎಂದು ವೈದ್ಯರೇ ಹೇಳುತ್ತಾರೆ.

ಕಡಲೆ ಕಾಳುಗಳು

• ತಮ್ಮಲ್ಲಿ ಅಧಿಕಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಈ ಕಡಲೆಕಾಳು ಗಳು ಆರೋಗ್ಯಕ್ಕೆ ಬೇಕಾಗುವ ಕಬ್ಬಿಣಾಂಶ ಹಾಗೂ ಪ್ರೋಟೀನ್ ಅಂಶಗಳು ಕೊರತೆಯಾಗಂತೆ ನೋಡಿ ಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಕಾಳುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್, ವಿಟಮಿನ್ ಬಿ6 ಹಾಗೂ ಕರಗುವ ನಾರಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುವುದರಿಂದ

• ಜೀರ್ಣಶಕ್ತಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರ ಜೊತೆಗೆ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇನ್ನೂ ಪ್ರಮುಖವಾಗಿ ಮೊಟ್ಟೆಯಲ್ಲಿ ಇರುವಷ್ಟೇ ಪ್ರೋಟೀನ್ ಅಂಶಗಳು ಈ ಕಾಳಿನಲ್ಲಿ ಸಿಗುವುದರಿಂದ, ದೇಹದ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಕಂದು ಬಣ್ಣದ ಅನ್ನ

6

• ನಿಮಗೆ ಗೊತ್ತಿರಲಿ ಬಿಳಿ ಬಣ್ಣದ ಅಕ್ಕಿಯಲ್ಲಿ ಅಧಿಕ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅಂಶಗಳು ಕಂಡು ಬರುತ್ತದೆ. ಇದಕ್ಕೆ ಬದಲಾಗಿ ಕಂದು ಬಣ್ಣದ ಅಕ್ಕಿಯಿಂದ ತಯಾರು ಮಾಡಿದ ಅನ್ನವನ್ನು ಸೇವನೆ ಮಾಡಿದರೆ ಅಪಾರ ಪ್ರಮಾಣದ ಆರೋಗ್ಯ ಪ್ರಜೋಜನಗಳು ನಮ್ಮದಾಗುತ್ತದೆ. ಅದರಲ್ಲೂ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವವರು ಆದಷ್ಟು ಈ ಕಂದು ಬಣ್ಣದ ಅನ್ನ ಊಟ ಮಾಡಿದರೆ ಬಹಳ ಒಳ್ಳೆಯದು.

• ಇದರ ಜೊತೆಗೆ ಈ ಅನ್ನದ ಇನ್ನಷ್ಟು ಪ್ರಯೋಜನಗಳನ್ನು ನೋಡುವುದಾದರೆ, ಇವು ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶದ ಸಾಧ್ಯತೆ ಯನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಗ್ಲೈಸೆಮಿಕ್ ಸೂಚ್ಯಂಕವನ್ನು ತಗ್ಗಿಸಿಕೊಳ್ಳುವ ವಿಚಾರ ವಾಗಿ ಕಂದುಬಣ್ಣದ ಅಕ್ಕಿಯಿಂದ ತಯಾರು ಮಾಡಿದ ಅನ್ನವನ್ನು ಸೇವನೆ ಮಾಡುವುದು ಒಳ್ಳೆಯದು. ಇದರಿಂದ ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಲು ನೆರವಾಗುತ್ತದೆ.