ಮನೆ ರಾಜ್ಯ ತುಮಕೂರು: ಗೋಡೆ ಬರಹದಲ್ಲಿ ಕನ್ನಡದ ತಪ್ಪು ಪದಗಳು- ಸಾರ್ವಜನಿಕರ ಆಕ್ರೋಶ

ತುಮಕೂರು: ಗೋಡೆ ಬರಹದಲ್ಲಿ ಕನ್ನಡದ ತಪ್ಪು ಪದಗಳು- ಸಾರ್ವಜನಿಕರ ಆಕ್ರೋಶ

0

ತುಮಕೂರು(Tumkur): ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ ವಿವಿಧ ಕಡೆ ಜಾಗೃತಿ ಮೂಡಿಸುವ ಸಲುವಾಗಿ ಬರೆದಿರುವ ಗೋಡೆ ಬರಹವು ತಪ್ಪು ಕನ್ನಡ ಪದಗಳಿಂದ ಕೂಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಪರಿಸರ, ಟ್ರಾಫಿಕ್ ರೂಲ್ಸ್, ಸಂಚಾರ ನಿಯಮಗಳು ಹಾಗೂ ಸ್ಮಾರ್ಟ್ ಸಿಟಿ ಕುರಿತ ಸಂದೇಶ ಸಾರುವ ಗೋಡೆ ಬರಹಗಳನ್ನು ಬರೆಯಲಾಗುತ್ತಿದೆ. ಆದರೇ ಬರಹಗಳಲ್ಲಿ ಕನ್ನಡ ಪದಗಳು ತಪ್ಪಾಗಿರುವುದರಿಂದ ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಇನ್ನು ಕನ್ನಡ ಪದಗಳ ದೊಡ್ಡ ಅಕ್ಷರದಲ್ಲಿ ತಪ್ಪಾಗಿ ಬರೆಯುತ್ತಿದ್ದರೂ ಕೂಡ ಸ್ಮಾರ್ಟ್ ಸಿಟಿ ಅಧಿಕಾರಿಗಳು ಅಥವಾ ಮಹಾನಗರ ಪಾಲಿಕೆ ಸಿಬ್ಬಂದಿಗಳು ಇತ್ತ ಗಮನಹರಿಸದೆ ನಿರ್ಲಕ್ಷ್ಯ ತೋರಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಕಳೆದ ಒಂದು ತಿಂಗಳಿನಿಂದ ಈ ರೀತಿ ತಪ್ಪಾಗಿ ಕನ್ನಡ ಪದಗಳನ್ನು ಬಳಸುತ್ತ ಗೋಡೆ ಬರಹಗಳನ್ನು ಬರೆಯಲಾಗುತ್ತಿದ್ದು, ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸುತ್ತಿಲ್ಲ.ಇದು ಹೀಗೆ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಕನ್ನಡಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.