ಮೈಸೂರು(Mysuru): ಈ ಬಾರಿ ಶ್ರೀರಂಗಪಟ್ಟಣ ದಸರಾಗೆ ಐದು ಆನೆಗಳನ್ನು ಕಳುಹಿಸಬೇಕಿದ್ದು, ಆದರೆ ಇನ್ನು ನಿರ್ಧಾರ ಅಂತಿಮವಾಗಿಲ್ಲ ಎಂದು ಡಿಸಿಎಫ್ ಡಾ. ಕರಿಕಾಳನ್ ಮಾಹಿತಿ ನೀಡಿದರು.
ಫಿರಂಗಿ ತಾಲೀಮಿನ ಬಳಿಕ ಮಾತನಾಡಿದ ಡಿಸಿಎಫ್ ಡಾ. ಕರಿಕಾಳನ್, ಶ್ರೀರಂಗಪಟ್ಟಣ ದಸರೆಗೆ 5 ಆನೆಗಳು ಬೇಕು ಎಂದು ಕೇಳಿದ್ದಾರೆ. ಅರಣ್ಯ ಇಲಾಖೆಯ ಮುಖ್ಯಸ್ಥರಿಂದ ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿಲ್ಲ. ಆನೆಗಳನ್ನು ಕಳುಹಿಸಬೇಕಾದರೆ ಈ ಬಾರಿ ಎಸ್.ಒ.ಪಿ ತಯಾರು ಮಾಡಿದ್ದೇವೆ.
ಆನೆಗಳ ಸುತ್ತಲೂ 10 ಅಡಿ ಅಂತರದಲ್ಲಿ ಯಾರು ಬಾರದಂತೆ ಜಾಗ್ರತೆ ವಹಿಸಬೇಕು. ಪಟಾಕಿ ಸಿಡಿಸುವುದು, ಡ್ರೋಣ್ ಬಳಸುವುದು, ಜನರು ಹತ್ತಿರ ಬರುವುದನ್ನು ನಿಷೇಧಿಸಿದ್ದೇವೆ. ನಮ್ಮ ವೈದ್ಯರು, ಸಿಬ್ಬಂದಿಯು ಕೂಡ ಅಲ್ಲಿ ಇರಲಿದ್ದಾರೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಆಯೋಜಕರು ವಹಿಸಬೇಕು. ಈ ಬಾರಿ ಮಹೇಂದ್ರ ಆನೆಯೊಂದಿಗೆ ಇತರೆ ನಾಲ್ಕು ಆನೆಗಳನ್ನು ಕಳುಹಿಸಲಾಗುವುದು ಎಂದು ಡಿಸಿಎಫ್ ಡಾ. ಕರಿಕಾಳನ್ ತಿಳಿಸಿದರು.