ಮೈಸೂರು (Mysuru): ಅಳಿವಿನಂಚಿನಲ್ಲಿರುವ ಮನುಷ್ಯ ಜಾತಿಯ ಪ್ರಾಣಿ ರಿಂಗ್ ಟೈಲ್ಡ್ ಲೆಮುರ್ ಪ್ರಾಣಿಗಳಿಗಾಗಿ ಅವುಗಳ ವಾಸಕ್ಕೆ ಯೋಗ್ಯವಾದ ಮನೆ ನಿರ್ಮಾಣಕ್ಕಾಗಿ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿಂದು ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು.
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈ ಲಿ.ನ (BRBNMPL) CSR ನಿಧಿಯಿಂದ ಮನೆ ನಿರ್ಮಾಣಕ್ಕೆ ಕೊಡುಗೆಯಾಗಿ 75.00 ಲಕ್ಷಗಳನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್, ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಪಿ ರವಿ, BRBNMPL ಉಪ ಪ್ರಧಾನ ವ್ಯವಸ್ಥಾಪಕ ಹರ್ಷಕುಮಾರ್ ಮನ್ರಾಲ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಅಶೋಕ್ ಕುಮಾರ್ ದಾಸ್, ಸದಸ್ಯರಾದ ಜ್ಯೋತಿ ರೇಚಣ್ಣ, ಅಖಿಲೇಶ್ವರ್ ರೆಡ್ಡಿ, ಎಂ ಪಿ ರವಿ ಉಪಸ್ಥಿತರಿದ್ದರು.
ಅಳಿವಿನಂಚಿನಲ್ಲಿರುವ ಈ ಪ್ರಾಣಿಗಳ ಉಳಿವಿಗಾಗಿ ಕಾಳಜಿ ತೋರಿದ BRBNMPL ನ ಎಲ್ಲರಿಗೂ ಮೃಗಾಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಅಜೀತ ಕುಲಕರ್ಣಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.
ರಿಂಗ್–ಟೇಲ್ಡ್ ಲೆಮರ್
ರಿಂಗ್-ಟೇಲ್ಡ್ ಲೆಮರ್‌ಗಳು ನೈಋತ್ಯ ಮಡಗಾಸ್ಕರ್‌ನಲ್ಲಿ ವಾಸಿಸುತ್ತವೆ, ಉಂಗುರ ಬಾಲದ ಲೆಮೂರ್ (ಲೆಮುರ್ ಕ್ಯಾಟ್ಟಾ) IUCN ರೆಡ್ ಲಿಸ್ಟ್‌ನಲ್ಲಿ ಅಳಿವಿನಂಚಿನಲ್ಲಿರುವಂತೆ ಪಟ್ಟಿಮಾಡಲಾಗಿದೆ ಈ ಲೆಮರ್ ಒಣ ಕಾಡುಗಳು, ಸ್ಪೈನಿ ಪೊದೆಗಳು, ಮಲೆನಾಡಿನ ಕಾಡುಗಳು, ಮ್ಯಾಂಗ್ರೋವ್‌ಗಳಲ್ಲಿ ಕಂಡುಬರುತ್ತದೆ.