ಮನೆ ರಾಜ್ಯ ದಸರಾ: ಕಣ್ಮನ ಸೆಳೆದ ರಂಗೋಲಿ ಚಿತ್ತಾರಗಳು

ದಸರಾ: ಕಣ್ಮನ ಸೆಳೆದ ರಂಗೋಲಿ ಚಿತ್ತಾರಗಳು

0

ಮೈಸೂರು(Mysuru) : ದಸರಾ ಮಹೋತ್ಸವದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ವತಿಯಿಂದ ಇಂದು ಅಂಬಾ ವಿಲಾಸ ಅರಮನೆ ಮುಂಭಾಗ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ವಿವಿಧ ವಿನ್ಯಾಸಗಳ ರಂಗೋಲಿ ಚಿತ್ತಾರಗಳು ನೋಡುಗರ ಗಮನಸೆಳೆದವು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ರಂಗೋಲಿ ಕಲೆ ಪುರಾತನ ಕಲೆ ಮಾತ್ರವಲಗಲದೇ. ವೈಜ್ಞಾನಿಕ ಕಲೆಯೂ ಆಗಿದೆ. ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುವ ಮೂಲಕ ಆರೋಗ್ಯಕ್ಕೂ ಅನುಕೂಲವಾಗಿದೆ ಎಂದರು.

ರಂಗೋಲಿ ಬಿಡಿಸುವವರನ್ನು ವಿದೇಶಗಳಲ್ಲಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇವಲ ಪುಟ್ಟ ಬಾಲಕಿಯರಿಗೆ, ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಮೂರು ವರ್ಗದಲ್ಲಿ ಸ್ಪರ್ಧೆ ಆಯೋಜಿಸಬೇಕು ಎಂದು ತಿಳಿಸಿದರು.

ಜಿಪಂ ಉಪಕಾರ್ಯದರ್ಶಿ ಡಾ.ಪ್ರೇಮಕುಮಾರ್,‌ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು, ಸಮಿತಿ ಉಪಾಧ್ಯಕ್ಷರಾದ ಹೇಮಾ ನಂದೀಶ, ಸದಸ್ಯ ರಾಘವೇಂದ್ರ ಇದ್ದರು.

ಸುಮಾರು 50 ಕ್ಕೂ ಹೆಚ್ಚು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.