ಮನೆ ರಾಜಕೀಯ ಆರ್’ಎಸ್’ಎಸ್ ಹೆಸರು ಹೇಳದಿದ್ದರೆ ಸಿದ್ದರಾಮಯ್ಯ ಅವರ ರಾಜಕೀಯ ನಡೆಯುವುದಿಲ್ಲ: ಸಿಎಂ ಬೊಮ್ಮಾಯಿ

ಆರ್’ಎಸ್’ಎಸ್ ಹೆಸರು ಹೇಳದಿದ್ದರೆ ಸಿದ್ದರಾಮಯ್ಯ ಅವರ ರಾಜಕೀಯ ನಡೆಯುವುದಿಲ್ಲ: ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ದೇಶದಲ್ಲೇ ಏನೇ ನಡೆದರೂ ಆರ್‌ಎಸ್‌ಎಸ್‌ಗೆ ಸಂಬಂಧ ಕಲ್ಪಿಸುವುದು ಸಿದ್ದರಾಮಯ್ಯ ಅವರ ಜಾಯಮಾನ. ಆರ್‌ಎಸ್ಎಸ್‌ ಹೆಸರು ಹೇಳದೆ ಇದ್ದರೆ ಸಿದ್ದರಾಮಯ್ಯ ಅವರ ರಾಜಕೀಯವೇ ನಡೆಯುವುದೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್‌ಐ ಜತೆ ನೆಂಟಸ್ಥಿಕೆ ಇರುವುದರಿಂದಲೇ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆ ಸಂಘಟನೆಯ ಮೇಲಿನ ನಿಷೇಧವನ್ನು ವಿರೋಧಿಸುತ್ತಿದ್ದಾರೆ. ಇವರ ಸರ್ಕಾರದ ಅವಧಿಯಲ್ಲೇ ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸ್‌ಗಳನ್ನು ಹಿಂದಕ್ಕೆ ಪಡೆದಿದ್ದರು. ಇದಕ್ಕಿಂತ ಸಾಕ್ಷಿ ಬೇಕಾ?  ಅವರು ಪ್ರಶ್ನಿಸಿದರು.

ಬೆಕ್ಕಿನ ಕಣ್ಣಿನಲ್ಲಿ ಇಲಿ ಎಂಬಂತೆ ಸಿದ್ದರಾಮಯ್ಯ ಕಣ್ಣಲ್ಲಿ ಆರ್‌ಎಸ್‌ಎಸ್‌ ಇರುತ್ತದೆ. ಆರ್‌ಎಸ್‌ಎಸ್‌ ಅನ್ನು ಏಕೆ ನಿಷೇಧ ಮಾಡಬೇಕು? ದೇಶ ಭಕ್ತ ಸಂಘಟನೆ ಆಗಿರುವುದರಿಂದಲೇ? ದೀನ–ದಲಿತರಿಗಾಗಿ ಮತ್ತು ಸಂಕಷ್ಟದಲ್ಲಿ ಇರುವವರಿಗಾಗಿ ಕೆಲಸ ಮಾಡುತ್ತಿರುವುದರಿಂದಲೇ? ಈ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುತ್ತಿರುವುದಕ್ಕಾಗಿ ನಿಷೇಧ ಮಾಡಬೇಕೆ? ದೇಶದ್ರೋಹ ಮತ್ತು ಭಯೋತ್ಪಾದಕ ಸಂಘಟನೆಯ ವಿಚಾರದಲ್ಲಿ ರಾಜಕೀಯ ಪ್ರೇರಿತ ಹೇಳಿಕೆ ನೀಡುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಪಿಎಫ್‌ಐ ಹಲವು ವರ್ಷಗಳಿಂದ ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿದೆ. ಈ ಸಂಘಟನೆಯ ಮೇಲೆ ನಿಷೇಧ ಹೇರಬೇಕು ಎಂದು ಬಿಜೆಪಿ ಮಾತ್ರ ಅಲ್ಲ ಕಮ್ಯುನಿಸ್ಟ್‌ ಸರ್ಕಾರ ಇರುವ ಕೇರಳ, ಕಾಂಗ್ರೆಸ್ ಅಧಿಕಾರ ಇರುವ ರಾಜ್ಯಗಳೂ ಸೇರಿ ಹಲವು ರಾಜ್ಯಗಳು ಕೇಂದ್ರದ ಮೇಲದ ಒತ್ತಡ ಹೇರಿತ್ತಲೇ ಬಂದಿವೆ ಎಂದರು.