ಮನೆ ರಾಜ್ಯ ಮೈಸೂರು ದಸರಾ ‘ಗೋಲ್ಡ್ ಕಾರ್ಡ್’ ಸೌಲಭ್ಯ ಬಿಡುಗಡೆ

ಮೈಸೂರು ದಸರಾ ‘ಗೋಲ್ಡ್ ಕಾರ್ಡ್’ ಸೌಲಭ್ಯ ಬಿಡುಗಡೆ

0

ಮೈಸೂರು(Mysuru): ನಾಡಹಬ್ಬ ದಸರಾ ವೀಕ್ಷಣೆಗಾಗಿ ವಿದೇಶಿ-ದೇಶಿ ಪ್ರವಾಸಿಗರು/ಸಾರ್ವಜನಿಕರ ಅನುಕೂಲಕ್ಕಾಗಿ “ಗೋಲ್ಡ್ ಕಾರ್ಡ್” ಸೌಲಭ್ಯವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

“ಗೋಲ್ಡ್ ಕಾರ್ಡ್” ಖರೀದಿಯನ್ನು ಆನ್ ಲೈನ್ ಮುಖಾಂತರ ಮಾಡಬಹುದಾಗಿದೆ. ಇದರ ಬೆಲೆ ರೂ.4,999/- ಮಾಡಲಾಗಿದೆ.

ಗೋಲ್ಡ್ ಕಾರ್ಡ್ ಲಭ್ಯತೆ ಅನುಗುಣವಾಗಿ ಆನ್ ಲೈನ್ ಮೂಲಕ www.mysoredasara.gov.in ವೆಬ್ ಸೈಟ್‌ನಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿಗೆ ಗರಿಷ್ಟ  ಎರಡು “ಗೋಲ್ಡ್ ಕಾರ್ಡ್” ಖರೀದಿಸಬಹುದಾಗಿದೆ. ಒಮ್ಮೆ ಆನ್ ಲೈನ್ ಪಾವತಿ ದೃಢೀಕರಿಸಿದ ನಂತರ ಪ್ರವಾಸಿಗರು “ಗೋಲ್ಡ್ ಕಾರ್ಡ್” ಅನ್ನು ದಿನಾಂಕ: 29-09-2022 ಕೆಎಸ್‌ಡಿಟಿಸಿ (ಪ್ರವಾಸೋದ್ಯಮ ಇಲಾಖೆ) ಮಯೂರ ಹೋಟೆಲ್ ಹತ್ತಿರ ಮೈಸೂರು ಇಲ್ಲಿ ಬೆಳಿಗ್ಗೆ 11.00 ರಿಂದ ಸಂಜೆ 5.30 ರವರೆಗೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಗೋಲ್ಡ್ ಕಾರ್ಡ್ ಪಡೆದುಕೊಳ್ಳುವಾಗ ಪಾವತಿ, ನಂತರ ಸ್ವೀಕೃತವಾಗುವ ಇಮೇಲ್ ಪ್ರತಿ ಹಾಗೂ ಯಾವುದಾದರೂ ಒಂದು ಐಡಿ ಪ್ರೂಫ್ ಅನ್ನು  ಹಾಜರುಪಡಿಸುವುದು ಕಡ್ಡಾಯವಾಗಿರುತ್ತದೆ.

ಗೋಲ್ಡ್ ಕಾರ್ಡ್ ವಿಶೇಷತೆಗಳು ಹೀಗಿವೆ ನೋಡಿ.

1. ದಸರಾ ಮೆರವಣಿಗೆ-ಜಂಬೂ ಸವಾರಿ ವೀಕ್ಷಣೆಗೆ ಅವಕಾಶ.

2. ಪಂಜಿನ ಕವಾಯತು ಬನ್ನಿಮಂಟಪ ವೀಕ್ಷಣೆಗೆ ಅವಕಾಶ.

3. ಈ ಕೆಳಕಂಡ ಪ್ರವಾಸಿ ತಾಣಗಳಿಗೆ ಒಮ್ಮೆ ಮಾತ್ರ ಉಚಿತವಾಗಿ ವೀಕ್ಷಣೆಗೆ ಅವಕಾಶ.

ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ,  ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನ, ಫಲಪುಷ್ಪ ಪ್ರದರ್ಶನ, ದಸರಾ ವಸ್ತು ಪ್ರದರ್ಶನ, ಸೇಂಟ್ ಫಿಲೋಮಿನ ಚರ್ಚ್, ರೈಲ್ವೆ ಮ್ಯೂಸಿಯಮ್, ಕೃಷ್ಣರಾಜ ಸಾಗರ ಅಣೆಕಟ್ಟು.