ಮನೆ ಆರೋಗ್ಯ ಹೃದಯಾಘಾತ: ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸದಿರಿ

ಹೃದಯಾಘಾತ: ಈ ಲಕ್ಷಣಗಳನ್ನು ನಿರ್ಲಕ್ಷ್ಯಿಸದಿರಿ

0

ಹೃದಯಾಘಾತ ತುಂಬಾ ಡೇಂಜರ್. ಇದರ ರೋಗಲಕ್ಷಣಗಳನ್ನು ನಾವು ಎಂದಿಗೂ ಸಹ ನಿರ್ಲಕ್ಷ ಮಾಡಬಾರದು. ಜನರು ಇತ್ತೀಚಿನ ತಮ್ಮ ಜೀವನಶೈಲಿಯಿಂದ ಮತ್ತು ಕಲುಷಿತ ವಾತಾವರಣದಲ್ಲಿ ಜೀವಿಸುವುದರಿಂದ ದೇಹದಲ್ಲಿ ಹರಿಯುವ ರಕ್ತ ಆರೋಗ್ಯಕರ ಎಂದು ಹೇಳಲು ಸಾಧ್ಯವಿಲ್ಲ.

ಹೀಗಾಗಿ ದೇಹದಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಇದರಿಂದ ಹೃದಯ ರಕ್ತನಾಳಗಳಲ್ಲಿ ರಕ್ತದ ಹರಿಯುವಿಕೆ ಕಡಿಮೆಯಾಗಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೃದಯಾಘಾತ ಆಗುವ ಸಂದರ್ಭ ಬಂದಾಗ ಕೆಲವೊಂದು ರೋಗಲಕ್ಷಣಗಳು ಕಾಣಿಸ ತೊಡಗುತ್ತವೆ.

ಎದೆ ನೋವು!

ದೇಹದ ಯಾವುದೇ ಭಾಗದಲ್ಲಿ ಅಂದರೆ ತೋಳು, ಕುತ್ತಿಗೆ, ಭುಜಗಳು, ದವಡೆ ಹಲ್ಲುಗಳು, ಬೆನ್ನಿನ ಭಾಗದ ಮತ್ತು ಹೊಟ್ಟೆಯ ಭಾಗದಲ್ಲಿ ನೋವು ಕಾಣಿಸುತ್ತದೆ. ಇದು ಕ್ರಮೇಣವಾಗಿ ಎದೆಯ ಭಾಗಕ್ಕೆ ಬಂದು ವಿಪರೀತ ನೋವು ಕೊಡುತ್ತದೆ. ಕೆಲವರಿಗೆ ಕಡಿಮೆ ನೋವು ಕೂಡ ಇರಬಹುದು. ಇಂತಹ ಸಂದರ್ಭದಲ್ಲಿ ಈ ಕೆಳಗಿನ ಲಕ್ಷಣಗಳು ಕಾಣಿಸುತ್ತವೆ

• ಎದೆ ಬಿಗಿತ

• ಅಜೀರ್ಣತೆ

• ಎದೆಯ ಮೇಲೆ ಯಾರೋ ಕುಳಿತ ಅನುಭವ

• ಅತಿಯಾದ ಒತ್ತಡ ಅಥವಾ ಎದೆ ಕಿವುಚಿದ ಅನುಭವ ಎದುರಾಗುತ್ತದೆ.

ಇನ್ನಿತರ ರೋಗಲಕ್ಷಣಗಳು

• ಹೃದಯಘಾತಕ್ಕೆ ಸಂಬಂಧಪಟ್ಟ ಇನ್ನಿತರ ರೋಗಲಕ್ಷಣಗಳನ್ನು ನೋಡುವುದಾದರೆ,

• ಮಾನಸಿಕ ಖಿನ್ನತೆ, ಕೆಮ್ಮು ಬರುವುದು, ತಲೆಸುತ್ತು ಬರುವುದು, ಕಣ್ಣು ಮಂಜಾಗುವುದು, ಅತಿಯಾದ ಹೃದಯ ಬಡಿತ ಆದಂತೆ ಅನುಭವ ಉಂಟಾಗುವುದು, ವಿಪರೀತ ಮೈ ಬೆವರುವುದು, ಉಸಿರಾಟದ ತೊಂದರೆ ಎದುರಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸುತ್ತವೆ.

ವೈದ್ಯರು ಹೇಳುವ ಪ್ರಕಾರ

• ಇನ್ನು ಕೆಲವು ರೋಗಲಕ್ಷಣಗಳನ್ನು ನೋಡುವುದಾದರೆ, ಪುರುಷರಿಗಿಂತ ಮಹಿಳೆಯರಿಗೆ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಹೃದಯಘಾತಕ್ಕೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

• ಕೆಲವು ಮಹಿಳೆಯರಿಗೆ ಎದೆಯ ಭಾಗದಲ್ಲಿ ಸ್ವಲ್ಪ ಕೂಡ ನೋವು ಇರುವುದಿಲ್ಲ ಆದರೆ ಕ್ರಮೇಣವಾಗಿ ಅವರಿಗೆ ದೇಹದ ಆಯಾಸ ಮತ್ತು ಸುಸ್ತು ಇರುತ್ತದೆ. ಇದು ಎಷ್ಟು ದಿನಗಳಾದರೂ ಹೋಗು ವುದಿಲ್ಲ.

• ಇದರ ಜೊತೆಗೆ ಹೃದಯಾಘಾತದಂತಹ ಸಂದರ್ಭದಲ್ಲಿ ಜ್ಞಾನತಪ್ಪಿ ಹೋಗುತ್ತದೆ. ಆದರೆ ಇದನ್ನು ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇದೆ ಅಂದರೆ ಶುಗರ್ ಲೋ ಆಗಿದೆ ಎಂದು ತಪ್ಪು ತಿಳಿದುಕೊಳ್ಳುತ್ತಾರೆ.

• ಇಸಿಜಿ ಮಾಡಿಸಿದರೆ ಸತ್ಯಾಂಶ ತಿಳಿಯುತ್ತದೆ. ಕುಟುಂಬದಲ್ಲಿ ಯಾವುದೇ ಹೃದಯಾಘಾತದ ಇತಿಹಾಸ ಇಲ್ಲದೆ ಇದ್ದರೂ ಕೂಡ ಈ ರೀತಿ ಆಗುತ್ತದೆ. ಇದನ್ನು ಹಾಗೆ ಬಿಟ್ಟರೆ ಹೃದಯ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

• ಮಹಿಳೆಯರು ತಮ್ಮ ಇಂತಹ ರೋಗ ಲಕ್ಷಣಗಳ ಬಗ್ಗೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ಪ್ರತಿಷ್ಠಿತ ಆಸ್ಪತ್ರೆಯ ಹೃದಯ ರೋಗ ತಜ್ಞರು ಎಚ್ಚರಿಕೆ ಕೊಡುತ್ತಾರೆ.

ಕೆಲವೊಂದು ಲಕ್ಷಣಗಳು ಹೀಗಿರುತ್ತದೆ

• ಸಹಿಸಲಸಾಧ್ಯವಾದ ಎದೆಯ ಒತ್ತಡ, ಎದೆ ಬಿಗಿತ ಮತವ ಎದೆ ಮಧ್ಯದಲ್ಲಿ ನೋವು. ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡು ಹೋಗದೇ ಇರುವುದು.

• ಎರಡು ಕಡೆಯ ತೋಳು, ಭುಜ, ಬೆನ್ನು ದವಡೆ ಮತ್ತು ಹೊಟ್ಟೆಯ ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ ಕಂಡು ಬರುವುದು.

• ಎದೆಯ ಬಿಗಿತ ಉಸಿರಾಟದ ತೊಂದರೆ ಎದುರಾಗುವುದು

• ತಂಪಾದ ವಾತಾವರಣದಲ್ಲಿ ಅತಿ ಹೆಚ್ಚು ಮೈ ಬೆವರುವುದು, ವಾಕರಿಕೆ, ವಾಂತಿ, ತಲೆಸುತ್ತು ಎದುರಾಗುವುದು.

• ಪುರುಷರಿಗೆ ಹೋಲಿಸಿದರೆ ಮಹಿಳೆಯರಿಗೆ ಎದೆನೋವು ಸಾಮಾನ್ಯ ಎಂದು ಹೇಳುತ್ತಾರೆ. ಇದರ ಜೊತೆಗೆ ಉಸಿರಾಟದ ತೊಂದರೆ, ವಾಕರಿಕೆ ಅಥವಾ ವಾಂತಿ ಜೊತೆಗೆ ದವಡೆ ನೋವು, ಬೆನ್ನು ನೋವು ಸಾಮಾನ್ಯವಾಗಿ ಬರುತ್ತದೆ.